ಕರ್ನಾಟಕದಲ್ಲಿ ಮೇ 27ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಪ್ರಕಟಣೆಯಂತೆ ಒಟ್ಟು ಕಳೆದ 24 ಗಂಟೆಗಳಲ್ಲಿ ಒಟ್ಟು 135 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1588 ಆಗಿದ್ದು, ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 2418. ಇಂದು ಆಸ್ಪತ್ರೆಯಿಂದ 17 ರೋಗಿಗಳು ಗುಣಮುಖರಾಗಿದ್ದು, ಒಟ್ಟು 781 ಮಂದಿ ಬಿಡುಗಡೆ ಹೊಂದಿದಂತಾಗಿದೆ. ಕೋವಿಡ್ ಸೋಂಕಿನಿಂದ ಬುಧವಾರ 3 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 47 ಆಗಿದೆ. ಕೋವಿಡ್ ಸೋಂಕಿತ ಪ್ರಕರಣಗಳಿದ್ದು, ಅನ್ಯಕಾರಣದಿಂದ ಮೃತಪಟ್ಟವರು 2. ಐಸಿಯುನಲ್ಲಿ 14 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯ ಒಟ್ಟು ಮಾಹಿತಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 45 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ ಜಿಲ್ಲೆಯವರು 43, ಉ.ಕ.1, ಕಲಬುರ್ಗಿಯವರು 1. ಒಟ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಒಂದು ಕೋವಿಡ್ ಅಲ್ಲದೆ ಅನ್ಯಕಾರಣದಿಂದ ಮೃತಪಟ್ಟಿರುವುದು ಆಗಿದೆ. ಇದುವರೆಗೆ ದಕ ಜಿಲ್ಲೆಯಲ್ಲಿ 81 ಪಾಸಿಟಿವ್ ಕೇಸ್ ಗಳು ದಾಖಲಾಗಿದ್ದು, 8 ಹೊರಜಿಲ್ಲೆ, ರಾಜ್ಯದವು. ಹೀಗಾಗಿ ಒಟ್ಟು ಜಿಲ್ಲೆಯದ್ದೇ ಆದ ಪ್ರಕರಣಗಳು 75.
ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 517 ಸ್ಯಾಂಪಲ್ ಗಳನ್ನು ಟೆಸ್ಟ್ ಗೆ ಕಳುಹಿಸಲಾಗಿದೆ. 321 ಮಂದಿಯ ಸ್ಯಾಂಪಲ್ ದೊರಕಿದ್ದು, ಅವರಲ್ಲಿ 11 ಪಾಸಿಟಿವ್ ಆಗಿದೆ. 1267 ಮಂದಿಯ ಸ್ಯಾಂಪಲ್ ವರದಿ ಬರಲು ಬಾಕಿ ಇದೆ. ಜಿಲ್ಲೆಯಲ್ಲಿ 20 ಮಂದಿ ನಿಗಾದಲ್ಲಿದ್ದಾರೆ.
ಇಂದು 11 ಪಾಸಿಟಿವ್ ಕೇಸ್: ದ.ಕ. ಜಿಲ್ಲೆಯಲ್ಲಿ ಇಂದು ಸ್ವೀಕೃತವಾದ ವರದಿಯಲ್ಲಿ 11 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇವರೆಲ್ಲರೂ ಇತರೆ ರಾಜ್ಯದಿಂದ ಬಂದು ಕ್ವಾರಂಟೈನ್ ಸೆಂಟರ್ ನಲ್ಲಿರಿಸಲಾಗಿರುತ್ತದೆ. ರೋಗಿಗಳ ವಿವರ ಹೀಗಿದೆ.
ಮುಂಬೈನಿಂದ ಬಂದ ಒಂದೇ ಕುಟುಂಬದ 35 ವರ್ಷದ ಪುರುಷ, 36 ವರ್ಷದ ಮಹಿಳೆ (ಉಲ್ಲಾಳ), ಒಂದೇ ಕುಟುಂಬದ 46 ವರ್ಷದ ಪುರುಷ, 11 ವರ್ಷದ ಬಾಲಕಿ, 59 ವರ್ಷದ ಮಹಿಳೆ, 3 ವರ್ಷದ ಬಾಲಕಿ (ಬಜಪೆಯಲ್ಲಿದ್ದವರು), ಒಂದೇ ಕುಟುಂಬದ 37 ವರ್ಷದ ಮಹಿಳೆ, 39 ವರ್ಷದ ಪುರುಷ, 17 ವರ್ಷದ ಬಾಲಕಿ (ಇವರು ಪುತ್ತೂರಿನವರು), ಬೆಳ್ತಂಗಡಿ ಕ್ವಾಂಟೈನ್ ನಲ್ಲಿದ್ದ 45 ವರ್ಷದ ಮಹಿಳೆ, ಉಳ್ಳಾಲ ಕ್ವಾಂಟೈನ್ ನಲ್ಲಿದ್ದ ಗುಜರಾತ್ ನಿಂದ ಆಗಮಿಸಿದ 22 ವರ್ಷದ ಪುರುಷ.
ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರು: ಕಾರ್ಕಳ ನಿವಾಸಿಗಳಾದ 26 ವರ್ಷದ ಪುರುಷ ಮತ್ತು 50 ವರ್ಷದ ಮಹಿಳೆ ಮತ್ತು ಸೋಮೇಶ್ವರ ನಿವಾಸಿ 38 ವರ್ಷದ ಮಹಿಳೆ.
ಎಫ್.ಐ.ಆರ್. ದಾಖಲು: ಮೇ 26ರಂದು ಮಂಗಳೂರಿನಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದ ಮೂವರು ಕ್ವಾರಂಟೈನ್ ನಿರ್ಬಂಧಿಸಿ ಹೊರಬಂದು ಓಡಾಡಿರುವುದು ಕಂಡುಬಂದಿದ್ದು, ಅವರ ಮೇಲೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.