ಬಂಟ್ವಾಳ ಪಾಣೆಮಂಗಳೂರಿನ ನೇತ್ರಾವತಿ ನದಿಗೆ ಸೇತುವೆಯಿಂದ ಹಾರಿ ಯುವಕನೋರ್ವ ಸಾವನ್ನಪ್ಪಿದ್ದಾರೆ. ಯುವಕ ನೀರಿಗೆ ಹಾರಿದ ಸಂದರ್ಭ ಮಾಡಿಕೊಂಡ ಸಂದರ್ಭ ತನ್ನ ಪ್ರಾಣವನ್ನೂ ಲೆಕ್ಕಿಸದೆ ನದಿಗೆ ಹಾರಿ ಯುವಕನನ್ನು ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ಕೊಡುತ್ತಿರುವ ಯುವಕರ ಸಾಹಸದ ದೃಶ್ಯಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಲ್ಲಡ್ಕ ಹನುಮಾನ್ ನಗರ ನಿವಾಸಿ ನಿಶಾಂತ್ (28) ಎಂದು ಗುರುತಿಸಲಾಗಿದೆ. ಈತ ಸೇತುವೆಯಿಂದ ಕೆಳಕ್ಕೆ ಹಾರಿದ ಸಂದರ್ಭ ಅಲ್ಲೇ ಇದ್ದ ಗೂಡಿನಬಳಿಯ ಶಮೀರ್ ಮುಹಮ್ಮದ್, ತೌಸೀಫ್, ಝಾಹಿದ್, ಜಾಯಿದ್, ಅಕ್ಕರಂಗಡಿಯ ಮುಕ್ತಾರ್, ಆರಿಫ್ ಹೈವೇ ಮತ್ತಿತರರು ನದಿಗೆ ಹಾರಿ ಆತನನ್ನು ಮೇಲಕ್ಕೆತ್ತಿದರು. ಕೂಡಲೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಾಣ ಉಳಿಸಲು ಆಗಲಿಲ್ಲ.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…