ಪ್ರಮುಖ ಸುದ್ದಿಗಳು

ಪೊಲೀಸ್ ಠಾಣೆ ಮೆಟ್ಟಿಲೇರಿದ ಕೊರೊನಾ ವೈರಸ್

ಜಾಹೀರಾತು

ಮೇ.15ರಂದು ಕೊರೊನಾ ಪ್ರಕರಣಗಳು ರಾಜ್ಯದಲ್ಲಿ 1056 ಇದ್ದವು. ಅಂದು 69 ಪ್ರಕರಣಗಳು ವರದಿಯಾದವು ಅದರೊಂದಿಗೆ ರಾಜ್ಯದಲ್ಲಿ 1 ಸಾವಿರ ಗಡಿ ದಾಟಿತ್ತು. ಅದಾಗಿ 10 ದಿನಗಳಲ್ಲಿಯೇ 2 ಸಾವಿರದ ಗಡಿಯನ್ನೂ ದಾಟಿತು. ಕರ್ನಾಟಕದಲ್ಲಿ ಭಾನುವಾರ 130 ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 2089ಕ್ಕೆ ಏರಿಕೆಯಾಗಿದೆ. ಅವುಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪೊಲೀಸರಿಗೂ ಬಾಧಿಸಿದ್ದು ಕಳವಳಕಾರಿ ವಿಚಾರ.

ರಾಜ್ಯದ ಪ್ರಕರಣ: ಇಂದು ಪತ್ತೆಯಾದ ಜಿಲ್ಲಾವಾರು ಲೆಕ್ಕ ಈ ರೀತಿ ಇದೆ. ಚಿಕ್ಕಬಳ್ಳಾಪುರ 27,ಯಾದಗಿರಿ 24, ಉಡುಪಿ 23, ಮಂಡ್ಯ             15, ಹಾಸನ 14, ಕಲಬುರ್ಗಿ 6, ಬೀದರ್ 6, ದಾವಣಗೆರೆ 4, ತುಮಕೂರು 2, ಉತ್ತರಕನ್ನಡ 2, ಶಿವಮೊಗ್ಗ 2, ದಕ್ಷಿಣಕನ್ನಡ 1, ಕೊಡಗು 1, ವಿಜಯಪುರ 1, ಧಾರವಾಡ 1, ಬೆಂಗಳೂರು 1.

ರಾಜ್ಯದಲ್ಲಿ ಇಂದು ಆಸ್ಪತ್ರೆಯಿಂದ 46 ಮಂದಿ ಬಿಡುಗಡೆ ಹೊಂದಿದ್ದಾರೆ. ಒಟ್ಟು ಇದುವರೆಗೆ 654 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಂದು ಹೊಸ ಪ್ರಕರಣಗಳು 130. ಒಟ್ಟು ಕ್ರಿಯಾಶೀಲವಾಗಿರುವ ಪ್ರಕರಣಗಳು 1391. ಒಟ್ಟು 42 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. 2089 ಮಂದಿಗೆ ಸೋಂಕು ದೃಢಪಟ್ಟಿದೆ. ಐಸಿಯುನಲ್ಲಿ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 66 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ 8 ಅನ್ಯರಾಜ್ಯ, ಜಿಲ್ಲೆಗಳಿಗೆ ಸೇರಿದ್ದು. ಇವತ್ತು 1 ಹೊಸ ಪ್ರಕರಣದೊಂದಿಗೆ ಜಿಲ್ಲೆಯದ್ದೇ ಆದ ಪ್ರಕರಣಗಳ ಸಂಖ್ಯೆ 60. ಒಟ್ಟು 34 ಮಂದಿ ದಕ್ಷಿಣ ಕನ್ನಡದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪೈಕಿ 1 ಉತ್ತರ ಕನ್ನಡ, 1 ಕಲಬುರ್ಗಿ ಜಿಲ್ಲೆಯವರು. ಒಟ್ಟು 6 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಅವುಗಳಲ್ಲಿ 1 ನಾನ್ ಕೋವಿಡ್ ಡೆತ್ ಎಂದು ಹೇಳಲಾಗಿದೆ.

ಚಿಕಿತ್ಸೆಯ ಬಳಿಕ 26 ಮಂದಿ ಬಿಡುಗಡೆ ಹೊಂದಿದ್ದಾರೆ. ಇವತ್ತು 384 ಮಂದಿಯ ಗಂಟಲು ದ್ರವ ಮಾದರಿಯನ್ನು ಕಳುಹಿಸಲಾಗಿದೆ. ಇವತ್ತು ಪ್ರಕಟಗೊಂಡ 329 ವರದಿಯಲ್ಲಿ 1 ಪಾಸಿಟಿವ್ ಬಂದಿದೆ. ಒಟ್ಟು 639 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ಫಲಿತಾಂಶ ಬರಲು ಬಾಕಿ ಇರುವುದು ಇಲ್ಲಿ  ಗಮನಾರ್ಹ.

ಬಂಟ್ವಾಳದ ಪ್ರಕರಣ: ಬಂಟ್ವಾಳ ತಾಲೂಕಿನಲ್ಲಿ ಒಟ್ಟು 14 ಪ್ರಕರಣಗಳು ದಾಖಲಾಗಿದೆ. ಅವುಗಳ ಪೈಕಿ ಇಂದು ಒಂದು ಪ್ರಕರಣ ಸೇರಿದೆ. ಸಜೀಪನಡು 1, ತುಂಬೆ 1, ವಿಟ್ಲ 2, ಬಂಟ್ವಾಳ ಪೇಟೆ 9, ನರಿಕೊಂಬು 1. ಇವುಗಳಲ್ಲಿ ಬಂಟ್ವಾಳದ 3 ಮಂದಿ ಮೃತಪಟ್ಟಿದ್ದಾರೆ. ವಿಟ್ಲದ 2 ಪ್ರಕರಣಗಳನ್ನು ಹೊರತುಪಡಿಸಿದರೆ, ಉಳಿದವರು ಗುಣಮುಖರಾಗಿದ್ದಾರೆ. ವಿಟ್ಲದ ಇಬ್ಬರಲ್ಲಿ ಒಬ್ಬರು ಮಹಾರಾಷ್ಟ್ರದಿಂದ ಬಂದವರಾದರೆ, ಮತ್ತೊಬ್ಬರು ಅವರ ಎರಡನೇ ಸಂಪರ್ಕದವರು.

ಇಂದಿನ ಪ್ರಕರಣ: ಇಂದು 42 ವರ್ಷದವರಿಗೆ ಕೋವಿಡ್ ದೃಢಪಟ್ಟಿದೆ. ಇವರು ಪೊಲೀಸ್ ಇಲಾಖೆಯ ಸಿಬ್ಬಂದಿಯಾಗಿದ್ದು, ವಿಟ್ಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. ಮಹಾರಾಷ್ಟ್ರದಿಂದ ಬಂದ ವ್ಯಕ್ತಿ ಇವರ ಠಾಣೆಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ರೋಗ ಬಂದಿರಬಹುದು ಎಂದು ತಿಳಿದುಬಂದಿದೆ.

ವಿಟ್ಲ ಠಾಣೆ ಸ್ಯಾನಿಟೈನ್, 48 ಗಂಟೆ ಬಂದ್: ವಿಟ್ಲ ಪೊಲೀಸ್ ಠಾಣೆಯನ್ನು ವಿಟ್ಲ ಪಟ್ಟಣ ಪಂಚಾಯಿತಿ ವತಿಯಿಂದ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಇಂದಿನಿಂದ 48 ಗಂಟೆಗಳ ಕಾಲ ಪೊಲೀಸ್ ಠಾಣೆಯನ್ನು ಮುಚ್ಚಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.