ಗುರುವಾರ ಪತ್ತೆಯಾದ 6 ಪ್ರಕರಣಗಳೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಸಂಖ್ಯೆ 61. ಇವುಗಳಲ್ಲಿ 6 ಅನ್ಯರಾಜ್ಯ, ಜಿಲ್ಲೆಗಳಿಗೆ ಸೇರಿದ್ದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದುವರೆಗೆ 21 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 5 ಮಂದಿ ಸಾವನ್ನಪ್ಪಿದ್ದಾರೆ. ಇದೀಗ 35 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ 333 ಮಂದಿಯ ಗಂಟಲು ದ್ರವ ಮಾದರಿಯನ್ನು ಕಳುಹಿಸಲಾಗಿದೆ. ಗುರುವಾರ ಲಭ್ಯವಾದ ಮಾದರಿಗಳು 502. ಒಟ್ಟು 408 ಮಂದಿಯ ಟೆಸ್ಟ್ ರಿಪೋರ್ಟ್ ಬರಲು ಬಾಕಿ ಇದೆ.
ಇವತ್ತಿನ ಪಾಸಿಟಿವ್ ಕೇಸ್ ವಿವರಗಳು: ಮೇ 18ರಂದು ಮಂಗಳೂರಿಗೆ ದುಬೈನಿಂದ ಆಗಮಿಸಿದ 178 ಪ್ರಯಾಣಿಕರ ಪೈಕಿ 110 ಮಂದಿ ಜಿಲ್ಲಾಡಳಿತ ನಿಗದಿಪಡಿಸುವ ಸ್ಥಳಗಳಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗಿದ್ದು, ಇವರಲ್ಲಿ 6 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಇವರಲ್ಲಿ ದ,ಕ.ಜಿಲ್ಲೆಯ 60 ವರ್ಷ, 44 ವರ್ಷ, 42 ವರ್ಷ, 44 ವರ್ಷ, 35 ವರ್ಷದ ಪುರುಷರು ಹಾಗೂ ಕಲಬುರ್ಗಿ ಜಿಲ್ಲೆಯ 29 ವರ್ಷದ ಪುರುಷ ಸೇರಿದ್ದಾರೆ. ಮೇ 20ರಂದು ಮಸ್ಕತ್ ನಿಂದ ಜಿಲ್ಲೆಗೆ ಆಗಮಿಸಿದ ವಿಮಾನದಲ್ಲಿದ್ದ 64 ಪ್ರಯಾಣಿಕರ ಪೈಕಿ 40 ಮಂದಿಯನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ. ಇವರಲ್ಲಿ 15 ಮಂದಿ ಸರ್ಕಾರದ ಉಚಿತ ಕ್ವಾರಂಟೈನ್ ಸೆಂಟರ್ ವ್ಯವಸ್ಥೆಗೆ ಕೋರಿದ್ದು, ಅವರನ್ನು ಹಾಸ್ಟ್ ಲ್ ಗಳಲ್ಲಿ ಇರಿಸಲಾಗಿದೆ.
ಇಂದು ಡಿಸ್ಚಾರ್ಜ್: ಇಂದು ಕುಲಶೇಖರ ನಿವಾಸಿ 45 ವರ್ಷದ ಪುರುಷ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದ ಮಾಹಿತಿ: ಇಂದು ಸಂಜೆ ದೊರೆತ ಮಾಹಿತಿಯಂತೆ ರಾಜ್ಯದಲ್ಲಿ 15 ಮಂದಿ ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಒಟ್ಟು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 571ಕ್ಕೆ ಏರಿದೆ. ಆದರೆ ಇಂದು ಮತ್ತೆ 143 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಕ್ರಿಯಾಶೀಲರಾಗಿರುವ 992 ಪ್ರಕರಣಗಳೂ ಸೇರಿದಂತೆ 1605 ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. 41 ಮಂದಿ ಒಟ್ಟು ಸೋಂಕಿತರು ಸಾವನ್ನಪ್ಪಿದ್ದು, ಇದೀಗ 9 ಮಂದಿ ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.