ಪಂಜಿಕಲ್ಲು ಗ್ರಾಮ ನಿವಾಸಿಗೆ ಹೆರಿಗೆ ನೋವು ಕಾಣಿಸಿಕೊಂಡ ಕುರಿತು ಸೋಮವಾರ ಮುಂಜಾನೆ 6ಕ್ಕೆ ಬಂಟ್ವಾಳ 108 ಆ್ಯಂಬುಲೆನ್ಸ್ ಗೆ ಕರೆ ಬಂದಿದೆ. ತಕ್ಷಣ ಆ್ಯಂಬುಲೆನ್ಸ್ ಚಾಲಕ ಭೀಮಪ್ಪ ಹಾಗೂ ಶುಶ್ರೂಷಕ ಮಂಜುನಾಥ ಅವರು ತೆರಳಿದ್ದಾರೆ. ಆದರೆ ಮಹಿಳೆಯ ಮನೆಗೆ ಹೋಗುವುದಕ್ಕೆ ರಸ್ತೆ ಇಲ್ಲದೆ ಸುಮಾರು ಅರ್ಧ ಕಿ.ಮೀ. ನಡೆದುಕೊಂಡು ಹೋಗುತ್ತಾರೆ. ಆದಾಗಲೇ ಮಹಿಳೆಗೆ ತೀವ್ರ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮನೆಯಲ್ಲೇ ಹೆರಿಗೆ ಮಾಡಿಸುತ್ತಾರೆ. ಬಳಿಕ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಹೀಗೆ ಪಂಜಿಕಲ್ಲು ಗ್ರಾಮದ ಮಹಿಳೆಗೆ ಬಂಟ್ವಾಳ ೧೦೮ ಆ್ಯಂಬುಲೆನ್ಸ್ ನವರ ಸಮಯ ಪ್ರಜ್ಞೆಯಿಂದ ಮನೆಯಲ್ಲೇ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ.