ವಿವರಗಳಿಗೆ ಓದಿರಿ:
ಜೇಸಿಐ ಬಂಟ್ವಾಳದ ಸದಸ್ಯರ ಶ್ರಮದಾನದ ಫಲವಾಗಿ ಚೆನ್ನೈತ್ತೋಡಿ ಗ್ರಾ.ಪಂ.ವ್ಯಾಪ್ಯಿಯ ಪಿಲಿಮೊಗರು ಹೊಯ್ಗೆದಡ್ಡು ನಿವಾಸಿ ಜಾನಕಿ ಅವರ ಮನೆಗೆ ಹೊಸ ಲುಕ್ ಸಿಕ್ಕಿದೆ.
ಲಾಕ್ಡೌನ್ ಬಿಡುವಿನ ವೇಳೆಯನ್ನು ಜೇಸಿ ಸದಸ್ಯರು ಮನೆ ದುರಸ್ತಿಗೆ ಸದುಪಯೋಗಪಡಿಸಿಕೊಂಡು ಬಡ ಮಹಿಳೆಯ ಮೊಗದಲ್ಲಿ ನೆಮ್ಮದಿಯ ಮಂದಹಾಸ ಮೂಡಿಸಿದ್ದಾರೆ.
ಕೋವಿಡ್ ಲಾಕ್ಡೌನ್ ನಿಂದ ಸಂಕಷ್ಷ ಪಡುತ್ತಿದ್ದ ಈ ಬಡ ಮಹಿಳೆಯ ಮನೆಗೆ ಆಹಾರದ ಕಿಟ್ ನೀಡುವಂತೆ ಸ್ಥಳೀಯರು ಜೇಸಿಐ ಬಂಟ್ವಾಳದ ಗಮನಕ್ಕೆ ತಂದಿದ್ದರು. ಅದರಂತೆ ಆಹಾರದ ಕಿಟ್ ನೀಡಲು ಹೋದ ಸಂದರ್ಭ ಮನೆಯ ಹೆಂಚಿನ ಛಾವಣಿ ಕುಸಿದು ಬೀಳುವ ಸ್ಥಿತಿಯಲ್ಲಿರುವುದು ಕಂಡು ಬಂತು. ಪ್ರತಿ ಮಳೆಗಾಲದಲ್ಲಿ ನೀರು ಸೋರಿಕೆಯಾಗಿ ಜಾನಕಿ ಅವರು ಆತಂಕ ಪಡುತ್ತಿದ್ದರು. ಇನ್ನೂ ಈ ಮನೆಗಾಲದಲ್ಲಂತೂ ಛಾವಣಿಯೇ ಕುಸಿದು ಬೀಳುವ ಭಯ ಅವರಲ್ಲಿತ್ತು. ಮನೆಯ ಛಾವಣಿಯನ್ನು ದುರಸ್ತಿ ಪಡಿಸುವ ಬಗ್ಗೆ ತೀರ್ಮಾನ ಕೈಗೊಂಡ ಜೇಸಿಐ ಬಂಟ್ವಾಳ, ದಾನಿಗಳ ಸಹಕಾರದೊಂದಿಗೆ ಶ್ರಮದಾನದ ಮೂಲಕ ಮನೆ ದುರಸ್ತಿ ಮಾಡಿಕೊಟ್ಟಿದೆ. ಜೇಸಿಐ ಬಂಟ್ವಾಳದ ಸದಸ್ಯರು ಹಾಗೂ ಇತರ ಸಮಾನ ಮನಸ್ಕರು ಸೇರಿ ಒಟ್ಟು 25 ಮಂದಿ ಯುವಕರು ಭಾನುವಾರ ಬೆಳಿಗ್ಗೆ ಶ್ರಮದಾನ ಆರಂಭಿಸಿ ಹೊಸ ಛಾವಣಿ ಅಳವಡಿಸಿದ್ದಾರೆ. ಲಾಕ್ಡನ್ ಸಂದರ್ಭ ಆಹಾರದ ಕಿಟ್ ನೀಡಲು ಬಂದಾಗ ಈ ಮನೆಯ ಹೆಂಚಿನ ಛಾವಣಿ ಸೋರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಜೇಸಿಐ ಸದಸ್ಯರು ದಾನಿಗಳ ಸಹಕಾರದೊಂದಿಗೆ ಶ್ರಮದಾನ ಮಾಡಿ ಲಾಕ್ ಡೌನ್ ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಿಕೊಂಡಿದ್ದೇವೆ ಎನ್ನುತ್ತಾರೆ ಜೇಸಿ ಬಂಟ್ವಾಳ ಅಧ್ಯಕ್ಷ ಸದಾನಂದ ಬಂಗೇರಾ