ಬಂಟ್ವಾಳದಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಗೆ ರಸ್ತೆ ಅಗೆದು ಹಾಕಲಾಗಿದ್ದ ಮಣ್ಣು ಭಾನುವಾರ ರಾತ್ರಿ ಸುರಿದ ಮಳೆಗೆ ಸ್ಥಳೀಯ ಮನೆಗಳಿಗೇ ನುಗ್ಗಿದೆ. ಬಿ.ಸಿ.ರೋಡು-ಜಕ್ರಿಬೆಟ್ಟು ಹೆದ್ದಾರಿಯ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆಯನ್ನು ಅಗೆದು ಹಾಕಲಾಗಿದ್ದು, ಭಾನುವಾರ ತಡರಾತ್ರಿಯಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆಯ ಪರಿಣಾಮ ಬಹುತೇಕ ಕಡೆ ಚರಂಡಿಯಿಲ್ಲದೆ ನೀರು ಹಾಗೂ ಮಣ್ಣು ಸ್ಥಳೀಯ ಮನೆಗಳಿಗೆ ನುಗ್ಗಿತ್ತು.
ರಸ್ತೆಯನ್ನು ಎತ್ತರಗೊಳಿಸುವ ಉದ್ದೇಶದಿಂದ ಮಣ್ಣು ತುಂಬಿಸಲಾಗಿದ್ದು, ಇನ್ನೂ ತಡೆಗೋಡೆ ನಿರ್ಮಾಣವಾಗಿಲ್ಲ. ಹೀಗಾಗಿ ಮಳೆನೀರು ಹರಿದು ಹೋಗುವುದಕ್ಕೆ ಚರಂಡಿಯಿಲ್ಲದೆ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ. ಹೀಗಾಗಿ ಹೆಚ್ಚಿನ ಮನೆಗಳ ಅಂಗಳದಲ್ಲಿ ಕೆಸರು ತುಂಬಿಕೊಂಡಿದೆ. ಬಿ.ಸಿ.ರೋಡು ಸಮೀಪದ ಮಯ್ಯರಬೈಲು ಬಳಿ ಮನೆಯೊಂದರ ಅಂಗಳಕ್ಕೆ ಪೂರ್ತಿ ಕೆಸರು ನುಗ್ಗಿ ತೊಂದರೆಯಾಗಿದೆ. ಅಲ್ಲೇ ಸಮೀಪದ ದೈವಸ್ಥಾನದ ಆವರಣದಲ್ಲೂ ನೀರು ತುಂಬಿದ್ದು, ಈ ಕುರಿತು ಹೆದ್ದಾರಿ ಇಲಾಖೆಯ ಸಂಬಂಧಪಟ್ಟ ಎಂಜಿನಿಯರ್‌ಗೆ ಮಾಹಿತಿ ನೀಡಲಾಗಿದ್ದು, ಸಮಸ್ಯೆ ಸರಿಪಡಿಸುವ ಭರವಸೆ ನೀಡಿದರು.
ಹೆಚ್ಚಿನ ಸುದ್ದಿಗಳಿಗೆ ಈ ಗ್ರೂಪ್ ಸೇರಬಹುದು. ಕ್ಲಿಕ್ ಮಾಡಿರಿ