ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 2 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಒಟ್ಟು 81 ಮಂದಿಯ ಲ್ಯಾಬ್ ಪರೀಕ್ಷಾ ವರದಿ ಇಂದು ದೊರಕಿದ್ದು, ಅವುಗಳ ಪೈಕಿ 2 ಪಾಸಿಟಿವ್ ಪ್ರಕರಣಗಳಿವೆ. 129 ಮಂದಿಯ ರಿಪೋರ್ಟ್ ಬರಲು ಬಾಕಿ ಇದೆ. ಒಟ್ಟು 7 ಮಂದಿ ನಿಗಾದಲ್ಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಈವರೆಗಿನ ಮಾಹಿತಿ ಹೀಗಿದೆ: ಒಟ್ಟು ಪ್ರಕರಣಗಳು 54. ಇವುಗಳಲ್ಲಿ 6 ಹೊರಜಿಲ್ಲೆ, ರಾಜ್ಯಕ್ಕೆ ಸೇರಿದ್ದು. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿ ಒಟ್ಟು 48 ಪಾಸಿಟಿವ್ ಪ್ರಕರಣಳು ದಾಖಲಾಗಿವೆ. 5 ಮಂದಿ ಸಾವನ್ನಪ್ಪಿದ್ದಾರೆ. 32 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 17 ಮಂದಿ ಗುಣಮುಖರಾಗಿದ್ದಾರೆ. ಇನ್ನು 129 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಲು ಬಾಕಿ ಇದೆ. ಇಂದು ಉಸಿರಾಟದ ತೊಂದರೆ ಇರುವ 9 ಮಂದಿ ಪತ್ತೆಯಾಗಿದ್ದಾರೆ.
ಇಂದಿನ ಕೇಸ್ ಗಳು: 55 ವರ್ಷದ ಮಹಿಳೆ ಮೇ 16ರಂದು ವೆನ್ಲಾಕ್ ಗೆ ದಾಖಲಾಗಿದ್ದು, ಇವರ ಗಂಟಲು ದ್ರವ ಪರೀಕ್ಷೆಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಮೇ 14ರಂದು ಮಂಗಳೂರಿಗೆ ಮುಂಬೈನಿಂದ ಆಗಮಿಸಿದ 30 ವರ್ಷದ ಪುರುಷ ಅವರನ್ನು ವೈದ್ಯಕೀಯ ನಿಗಾವಣೆಯಲ್ಲಿರಿಸಲಾಗಿದ್ದು, ಅವರಿಗೆ ಪಾಸಿಟಿವ್ ಗೊತ್ತಾಗಿದೆ.
ಬಂಟ್ವಾಳದವರು ಗುಣಮುಖ: ಮತ್ತೋರ್ವ ಬಂಟ್ವಾಳ ಕಸಬಾ ನಿವಾಸಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 69 ವರ್ಷದ ಇವರಿಗೆ ಮೇ 1ರಂದು ಪಾಸಿಟಿವ್ ಎಂದು ದಾಖಲಿಸಲಾಗಿತ್ತು. 14 ಮತ್ತು 16ರಂದು ಗಂಟಲು ದ್ರವ ಮಾದರಿ ನೆಗೆಟಿವ್ ಬಂದ ಕಾರಣ ಅವರನ್ನು ಬಿಡುಗಡೆಗೊಳಿಸಲಾಗಿದೆ. ಬಂಟ್ವಾಳ ಪೇಟೆಯಲ್ಲಿ ಒಂದೇ ಮನೆಯ ನಾಲ್ವರಿಗೆ ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ಅವರಲ್ಲಿ ಒಬ್ಬರು ಬಿಡುಗಡೆ ಹೊಂದಿದ್ದಾರೆ. ಬಂಟ್ವಾಳ ತಾಲೂಕಿನ ಒಟ್ಟು ಪಾಸಿಟಿವ್ ಪ್ರಕರಣಗಳು ಹೀಗಿವೆ: ಒಟ್ಟು ಪ್ರಕರಣಗಳು: 12 ಮೃತಪಟ್ಟವರು: 3 ಗುಣಮುಖರಾದವರು: 5. ಚಿಕಿತ್ಸೆ ಪಡೆಯುತ್ತಿರುವವರು 4. ತಾಲೂಕಿನ ಸಜಿಪ ನಡು ಮತ್ತು ತುಂಬೆ ಗ್ರಾಮದಲ್ಲಿ ಪಾಸಿಟಿವ್ ಆದ ಮಗು ಮತ್ತು ಯುವಕ, ನರಿಕೊಂಬು ಗ್ರಾಮದ ಮಹಿಳೆ, ಬಂಟ್ವಾಳದ ಒಬ್ಬ ಮಹಿಳೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಂಟ್ವಾಳ ಪೇಟೆಯ ಒಬ್ಬರು ಪುರುಷರು, ಇಬ್ಬರು ಮಹಿಳೆಯರು, ಒಬ್ಬ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾರೆ.