ಶನಿವಾರ ಯಾವುದೇ ಪಾಸಿಟಿವ್ ಪ್ರಕರಣಗಳು ಇರದೆ ನೆಮ್ಮದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಮತ್ತೆರಡು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದಿನ ಪತ್ತೆಯಾದ ಪ್ರಕರಣಗಳ ವಿವರ ಹೀಗಿದೆ. ಮುಂಬಯಿಯಿಂದ ಮೇ 14ರಂದು ಆಗಮಿಸಿದ 34 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಮಂಗಳೂರು ತಾಲೂಕು ಜೆಪ್ಪು ಪಟ್ನ ಗ್ರಾಮ ನಿವಾಸಿಯಾದ 31 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಕರ್ನಾಟಕದಲ್ಲಿ ಭಾನುವಾರ ಮಧ್ಯಾಹ್ನದ ವೇಳೆಗೆ ಒಟ್ಟು 54 ಹೊಸ ಪ್ರಕರಣಗಳು ಪತ್ತೆಯಾಗಿರುವುದು ಆತಂಕಕಾರಿ. ಇದೀಗ ಒಟ್ಟು ಪ್ರಕರಣಗಳ ಸಂಖ್ಯೆ 1146 ಆಗಿದೆ. ಇವರಲ್ಲಿ 37 ಮಂದಿ ಮೃತಪಟ್ಟಿದ್ದು, 497 ಮಂದಿ ಗುಣಮುಖರಾಗಿದ್ದಾರೆ. 611 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಪತ್ತೆಯಾಗಿರುವ ಪ್ರಕರಣಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ 2 ಮತ್ತು ಉಡುಪಿ ಜಿಲ್ಲೆಯ ಒಬ್ಬರು ಸೇರಿದ್ದಾರೆ. ಉಡುಪಿ ಜಿಲ್ಲೆಯ 54 ವರ್ಷದ ಪುರುಷ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದು, ಇವರು ಮುಂಬೈನಿಂದ ಬಂದಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ 31 ವರ್ಷದ ಪುರುಷನ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. ಇನ್ನೊಬ್ಬ 35 ವರ್ಷದ ಮಹಿಳೆ ಮುಂಬೈನಿಂದ ಆಗಮಿಸಿದ್ದು, ಅವರಿಗೆ ಸೋಂಕು ಪತ್ತೆಯಾಗಿದೆ.
ಉಡುಪಿ ಜಿಲ್ಲೆಯ 54 ವರ್ಷದ ಪುರುಷ ಹೃದಯ ಸಂಬಂಧಿ ತೊಂದರೆಯಿಂದ ಖಾಸಗಿ ಆಸ್ಪತ್ರೆಯಿಂದ ದಾಖಲಾಗಿದ್ದು, ಮೇ.14ರಂದು ಹೃದಯಾಘಾತದಿಂದ ಮೃತರಾಗಿದ್ದಾರೆ. ಮೇ.16ರಂದು ಇವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು.
ಮಂಡ್ಯ 22, ಕಲಬುರ್ಗಿ 10, ಹಾಸನ 6, ದಾರವಾಡ 4, ಕೋಲಾರ 3, ಯಾದಗಿರಿ 3, ದಕ್ಷಿಣಕನ್ನಡ 2, ಶಿವಮೊಗ್ಗ 2, ಉಡುಪಿ 1, ವಿಜಯಪುರ 1 ಇಂದು ಪತ್ತೆಯಾದ ಕೊರೊನಾ ಪಾಸಿಟಿವ್ ಪ್ರಕರಣಗಳು
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…