ಬಂಟ್ವಾಳ ತಾಲೂಕಿನ ಫರಂಗಿಪೇಟೆ ಎಂಬಲ್ಲಿ ಸೇವಾಂಜಲಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ.ಖಾದರ್ ವೈಯಕ್ತಿಕ ನೆಲೆಯಲ್ಲಿ ತುಂಬೆ, ಮೇರಮಜಲು, ಪುದು ಮತ್ತು ಕಳ್ಳಿಗೆ ಕ್ಲಸ್ಟರ್ ಮಟ್ಟದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಅಕ್ಷರದಾಸೋಹ ಕಾರ್ಮಿಕರಿಗೆ ಕಿಟ್ ವಿತರಿಸಿದರು.
ಜಿಲ್ಲೆಯಲ್ಲಿ ಈವರಗೆ ಐದು ಮಂದಿ ಕೊರೊನಾ ಸೊಂಕು ತಗುಲಿ ಸಾವನ್ನಪ್ಪಿದ್ದಾರೆ ಇದು ಅತ್ಯಂತ ದುಖಃಕರ ವಿಚಾರ, ಇಂತಹ ಘಟನೆಗಳು ಮುಂದಿನ ದಿನಗಳಗಲ್ಲಿ ಮರುಕಳಿಸಿದಿರಲಿ ಎಂದು ಅವರು ಹೇಳಿದರು. ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ , ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಸೇವಾಂಜಲಿ ಟ್ರಸ್ಟ್ ನ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ, ಉದ್ಯಮಿ ಮಹಾಬಲ ರೈ, ಪ್ರಮುಖರಾದ ಭಾಸ್ಕರ್ ರೈ, ಮೊಹಮ್ಮದ್ ಮೋನು ಫರಂಗಿಪೇಟೆ,
ಫೈಝಲ್ ಅಮ್ಮೆಮ್ಮರ್, ವೃಂದ ಪೂಜಾರಿ, ಇಮ್ತಿಯಾಜ್ ತುಂಬೆ, ಮಜೀದ್ ಪೆರಿಮಾರ್, ಸಮೀಜ್ ಫರಂಗಿಪೇಟೆ, ಇಸ್ಮಾಯಿಲ್ ಹತ್ತು ಮೈಲು, ಇಕ್ಬಾಲ್ ಸುಜೀರ್, ಅಷ್ವಧ್ ಫರಂಗಿಪೇಟೆ, ಜನಾರ್ಧನ್ ಚೆಂಡ್ತಿಮಾರ್, ಅಂಗನವಾಡಿ ಮೇಲ್ವಿಚಾರಕಿ ಸುಜಾತಾ , ಗವಾಡಿ ಕಾರ್ಯಕರ್ತರ ಅಧ್ಯಕ್ಷೆ ರವಿಕಲಾ ಉಪಸ್ಥಿತರಿದ್ದರು.ಮೇರೆಮಜಲು ಗ್ರಾ.ಪಂ.ಸದಸ್ಯೆ ವೃಂದಾ ಪೂಜಾರಿ ಸ್ವಾಗತಿಸಿ ವಂದಿಸಿದರು.