ವಿಡಿಯೋ, ಚಿತ್ರ ಮತ್ತು ಸುದ್ದಿಗಾಗಿ ಕ್ಲಿಕ್ ಮಾಡಿರಿ
ಹೊರರಾಜ್ಯಗಳಿಂದ ಬಂಟ್ವಾಳ ತಾಲೂಕಿಗೆ ಆಗಮಿಸುವವರನ್ನು ಕ್ವಾರಂಟೈನ್ ನಲ್ಲಿರಿಸುವ ಸಂದರ್ಭ ಆಯಾ ಗ್ರಾಪಂಗಳ ಪಿಡಿಒಗಳಿಗೆ ಹೆಚ್ಚಿನ ಜವಾಬ್ದಾರಿ ಇದ್ದು ಇದರ ನಿರ್ವಹಣಾ ಕಾರ್ಯ ಸಮರ್ಪಕವಾಗಿ ನಡೆಯಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸೂಚನೆ ನೀಡಿದ್ದಾರೆ.
ಬಂಟ್ವಾಳ ಬಂಟರ ಭವನದಲ್ಲಿ ಶುಕ್ರವಾರ ಕರೆದ ವಿಧಾನಸಭಾ ಕ್ಷೇತ್ರದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಸಂದರ್ಭದಲ್ಲೂ ಈ ಕುರಿತು ನಿರ್ಲಕ್ಷ್ಯ ಮಾಡದೆ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ನಡೆಸಬೇಕು ಎಂದರು.
ಈ ವೇಳೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಹೊರರಾಜ್ಯಗಳಿಂದ ಬಂದವರು ಗ್ರಾಮದಲ್ಲಿ ಎಲ್ಲೂ ಇಳಿಯದೆ ನೇರವಾಗಿ ಸೂಚಿಸಿದ ಜಾಗಗಳಿಗೇ ತಲುಪಬೇಕು ಎಂದರು. ತಹಸೀಲ್ದಾರ್ ರಶ್ಮಿ ಎಸ್.ಆರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸಲಹೆ ಸೂಚನೆಗಳನ್ನು ನೀಡಿದರು. ಇದೀಗ ಪ್ರಥಮ ಹಂತದಲ್ಲಿ ಹೊರರಾಜ್ಯಗಳಿಂದ ತಂಡ ಬರುತ್ತಿದ್ದು, ಇನ್ನು ಎರಡನೇ ಹಂತಕ್ಕೂ ಸಿದ್ಧತೆಗಳು ಆಗಬೇಕಿದೆ ಎಂಬ ಮಾಹಿತಿ ನೀಡಲಾಯಿತು.