2020-21ನೇ ಸಾಲಿನ ಮುಂಗಾರು ಹಂಗಾಮಿಗೆ ಸಂಬಂಧಿಸಿ ಬಂಟ್ವಾಳ ತಾಲೂಕಿನ 3 ರೈತ ಸಂಪರ್ಕ ಕೇಂದ್ರಗಳಾದ ಬಂಟ್ವಾಳ ಕಸಬಾ, ಪಾಣೆಮಂಗಳೂರು ಮತ್ತು ವಿಟ್ಲದಲ್ಲಿ ಭತ್ತದ ಬಿತ್ತನೆ ಬೀಜ ದಾಸ್ತಾನು ಲಭ್ಯವಿದೆ.
ಬಂಟ್ವಾಳ ಕಸಬಾ ಕೇಂದ್ರದಲ್ಲಿ ಎಂಒ4 (ಭದ್ರಾ) 45 ಕ್ವಿಂಟಾಲ್, ಜಯ 10 ಕ್ವಿಂಟಾಲ್ ಇದೆ. ಪಾಣೆಮಂಗಳೂರು ಕೇಂದ್ರದಲ್ಲಿ ಎಂಒ4 (ಭದ್ರಾ) 40 ಕ್ವಿಂಟಲ್, ಜಯ 10 ಕ್ವಿಂಟಲ್ ಇದೆ. ವಿಟ್ಲ ಕೇಂದ್ರದಲ್ಲಿ ಎಂಒ4 (ಭದ್ರಾ) 20 ಕ್ವಿಂಟಲ್, ಜಯ 5 ಕ್ವಿಂಟಲ್ ಮತ್ತು ಜ್ಯೋತಿ 5 ಕ್ವಿಂಟಲ್ ಇದೆ. ಎಂಒ4(ಭದ್ರಾ) ತಳಿಗೆ ಕೆಜಿಗೆ 32 ರೂ, ಜಯ ತಳಿಗೆ ಕೆಜಿಗೆ 28.5 ರೂ, ಜ್ಯೋತಿ ತಳಿಗೆ ಕೆಜಿಗೆ 38 ರೂ ನಿಗದಿಯಾಗಿದೆ. ಪ.ಜಾತಿ, ಪಂಗಡ ರೈತರಿಗೆ ಕೆಜಿಗೆ 12 ರೂ, ಇತರ ರೈತರಿಗೆ ಕೆಜಿಗೆ 8 ರೂ ಸಹಾಯಧನ ಲಭ್ಯ. ಎಕರೆಗೆ 25 ಕೆಜಿಯಂತೆ ಗರಿಷ್ಠ ಒಬ್ಬ ರೈತರಿಗೆ 5 ಎಕರೆಗೆ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತದೆ. ರೈತರು ತಮ್ಮ ಜಮೀನಿನ ಪಹಣಿ ಪತ್ರ, ಆಧಾರ್, ಬ್ಯಾಂಕ್ ಖಾತೆ ವಿವರ ಸಲ್ಲಿಸಿ, ಸಹಾಯಧನದಲ್ಲಿ ಬಿತ್ತನೆ ಬೀಜ ಪಡೆದುಕೊಳ್ಳಬಹುದು ಎಂದು ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.