ಸರ್ಕಾರಿ ಕಚೇರಿ

ವಿದ್ಯುತ್ ಬಿಲ್ ಹೆಚ್ಚಳ ಕುರಿತು ಅನುಮಾನವೇ? ಮೆಸ್ಕಾಂ ಹೇಳುವುದು ಹೀಗೆ

ವಿವರಗಳಿಗೆ ಕ್ಲಿಕ್ ಮಾಡಿರಿ

ಇತರ ಸುದ್ದಿಗಳಿಗೆ ಈ ವಾಟ್ಸಾಪ್ ಗುಂಪಿಗೆ ಸೇರಬಹುದು. ಕ್ಲಿಕ್ ಮಾಡಿರಿ 

https://chat.whatsapp.com/HEamC5PR5BQ1pNoRgq3yx4

ವಿದ್ಯುತ್ ಬಿಲ್‌ಗಳ ಬಗ್ಗೆ ಗ್ರಾಹಕರಿಗೆ ಉಂಟಾಗಿರುವ ಗೊಂದಲದ ಕುರಿತು ಮೆಸ್ಕಾಂ ಪ್ರಕಟಣೆ ನೀಡಿದೆ. ವಿವರ ಹೀಗಿದೆ ಮೆಸ್ಕಾಂ ಏನು ಹೇಳಿದೆ ಪೂರ್ತಿ ಓದಿರಿ. ನ್ಯೂನತೆಗಳು, ಸಂಶಯಗಳಿದ್ದರೆ 1912ಗೆ ಕರೆ ಮಾಡಿ.

  • ಗ್ರಾಹಕರಿಗೆ ಬಳಕೆ ಮತ್ತು ಸ್ಲ್ಯಾಬ್ ದರಗಳನ್ನು ಮಾಸಿಕ ಬಿಲ್ಲಿಗೆ ಅನ್ವಯಿಸುವಂತೆ ಕರಾರುವಕ್ಕಾಗಿ ಹಾಗೂ ಯಾವುದೇ ಹೆಚ್ಚುವರಿ ಆಗದಂತೆ ಎರಡು ತಿಂಗಳಿಗೂ ಸಮಾನವಾಗಿ ಯುನಿಟ್ ಬಳಕೆಯನ್ನು, ಸ್ಲ್ಯಾಬ್‌ಗಳನ್ನು ದುಪ್ಪಟ್ಟುಗೊಳಿಸಿ ಕನಿಷ್ಟ ಸ್ಲ್ಯಾಬ್‌ನಿಂದ ಅನ್ವಯಿಸುವಂತೆ ಬಿಲ್ಲಿನಲ್ಲಿ ತೋರಿಸಲಾಗಿದೆ.
  • ಕೋವಿದ್-19 ಲಾಕ್‌ಡೌನ್ ಸಮಯದಲ್ಲಿ ಬಹುತೇಕ ಜನರು ಮನೆಯಲ್ಲೇ ಇದ್ದು ಐಟಿ/ಬಿಟಿ ಮತ್ತು ಇತರೆ ಕ್ಷೇತ್ರಗಳ ಉದ್ಯೋಗಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ ಹಾಗೂ ಬೇಸಿಗೆ ಆಗಿರುವುದರಿಂದ ಮನೆಯಲ್ಲಿ ಫ್ಯಾನ್, ಎ.ಸಿ. ಮತ್ತು ಹಲವು ವಿದ್ಯುತ್ ಉಪಕರಣಗಳನ್ನು ಹೆಚ್ಚಾಗಿ ಉಪಯೋಗಿಸಿದ್ದಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿರುವ ಸಾಧ್ಯತೆಗಳಿರುತ್ತದೆ
  • ವಿದ್ಯುತ್ ಬಳಕೆ ಹೆಚ್ಚಾದಂತೆ ಹೆಚ್ಚಿನ ಸ್ಲ್ಯಾಬ್ ದರಗಳು ಅನ್ವಯವಾಗುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗಿರುತ್ತದೆ.
  • ಗ್ರಾಹಕರು ಹಿಂದಿನ ತಿಂಗಳ ಹಾಗೂ ಪ್ರಸಕ್ತ ರೀಡಿಂಗ್‌ನ್ನು ಹಾಗೂ ಸ್ಲ್ಯಾಬ್ ಲೆಕ್ಕಾಚಾರವನ್ನು ಪರಿಶೀಲಿಸಿ, ಯಾವುದಾದರೂ ನ್ಯೂನ್ಯತೆಗಳು ಕಂಡಲ್ಲಿ ಸಂಬಂಧಿಸಿದ ಉಪವಿಭಾಗವನ್ನು ಸಂಪರ್ಕಿಸಲು ಮೆಸ್ಕಾಂ ತಿಳಿಸಿದೆ.
  • ವಿವರಗಳು ಮೆಸ್ಕಾಂ ವೆಬ್‌ಸೈಟ್ https://mescom.karnataka.gov.in ಜಾಲತಾಣದಲ್ಲಿ ಲಭ್ಯವಿದೆ ಅಥವಾ ಸಹಾಯವಾಣಿ 1912 ಕ್ಕೆ ಕರೆಮಾಡಿ ತಮ್ಮ ವಿದ್ಯುತ್ ಬಿಲ್ಲಿನ ನ್ಯೂನ್ಯತೆಗಳ ಬಗ್ಗೆ ಸ್ಪಷ್ಟನೆ ಪಡೆದು ದೃಢೀಕರಿಸಿಕೊಂಡು ಪಾವತಿಸುವುದು.
  • ಒಂದು ವಿದ್ಯುತ್ ಬಿಲ್ಲಿನಲ್ಲಿ ನಿಗದಿತ ಶುಲ್ಕ, ವಿದ್ಯುತ್ ಶುಲ್ಕ ಮತ್ತು ತೆರಿಗೆ ಎಂಬ ಮೂರು ಅಂಶಗಳು ಸೇರಿರುತ್ತದೆ. ವಿದ್ಯುತ್ ಬಳಕೆ ಮಾಡದಿದ್ದರೂ ಸಹ ನಿಗಧಿತ ಶುಲ್ಕ ಮಾತ್ರ ಬಿಲ್ಲಿನಲ್ಲಿ ಬರುತ್ತದೆ.
  • ಕೆಲವು ಗ್ರಾಹಕರಿಗೆ ಡೋರ್ ಲಾಕ್/ ಸೀಲ್ ಡೌನ್ / ಕ್ವಾರಂಟೈನ್ ಆವರಣ ಕಾರಣದಿಂದ ಸರಾಸರಿ ಬಿಲ್ಲನ್ನು ನೀಡಲಾಗಿದೆ. ಇದು ಬಳಕೆಗಿಂತ ಹೆಚ್ಚುವರಿ ಎಂದು ಕಂಡುಬಂದಲ್ಲಿ ಅಂತಹ ಸ್ಥಾವರಗಳ ಮಾಪಕದ ರೀಡಿಂಗನ್ನು ಪುನಃ ತೆಗೆದುಕೊಳ್ಳಲಾಗುವುದು ಅಥವಾ ಗ್ರಾಹಕರು ಸ್ವತಹ ರೀಡಿಂಗನ್ನು ಸಂಬಂಧಿಸಿದ ಉಪವಿಭಾಗ ಅಥವಾ ಸಹಾಯವಾಣಿ 1912 ಕ್ಕೆ ಒದಗಿಸಿದಲ್ಲಿ ಪರಿಷ್ಕೃತ ಬಿಲ್ಲನ್ನು ನೀಡಲಾಗುವುದು.

  • MSME ಕೈಗಾರಿಕಾ ಗ್ರಾಹಕರಿಗೆ ಎಪ್ರಿಲ್ ಮತ್ತು ಮೇ-2020 ರ ಮಾಹೆಯ ಬಳಕೆಯ ಬಿಲ್ಲುಗಳಿಗೆ ನಿಗದಿತ ಶುಲ್ಕವನ್ನು ಮನ್ನಾ ಮಾಡಲಾಗಿರುವುದರಿಂದ ವಿದ್ಯುತ್ ಬಳಕೆಯ ಶುಲ್ಕವನ್ನು ಮಾತ್ರ ಪಾವತಿಸುವುದು.
  • MSME ಅಲ್ಲದ ಕೈಗಾರಿಕಾ ಗ್ರಾಹಕರಿಗೆ ಎಪ್ರಿಲ್ ಮತ್ತು ಮೇ-2020 ರ ಮಾಹೆಯ ಬಳಕೆಯ ಬಿಲ್ಲುಗಳಿಗೆ ನಿಗದಿತ ಶುಲ್ಕ / ಡಿಮ್ಯಾಂಡ್ ಶುಲ್ಕವನ್ನು ಪಾವತಿಸಲು ದಿನಾಂಕ JUNE 30 ರವರೆಗೆ ಕಾಲಾವಕಾಶ ನೀಡಲಾಗಿದೆ.
    30.06.2020 ರವರೆಗೆ ಬಿಲ್ ಪಾವತಿಸಿಲ್ಲದ ಕಾರಣಕ್ಕೆ ವಿದ್ಯುತ್ ನಿಲುಗಡೆ (Disconnection)  ಮಾಡಲಾಗುವುದಿಲ್ಲ.

ಮೆಸ್ಕಾಂ ವ್ಯಾಪ್ತಿಯಲ್ಲಿ ಗೃಹ ಬಳಕೆ ವಿದ್ಯುತ್ ಬಿಲ್ಲಿನ ಶುಲ್ಕವನ್ನು ಕೆಳಗಿನಂತೆ ಲೆಕ್ಕಾಚಾರ ಮಾಡಲಾಗುತ್ತದೆ

ನಿಗದಿತ ಶುಲ್ಕ ದರ (ನಗರ ಪ್ರದೇಶ) ದರ (ಗ್ರಾಮೀಣ ಪ್ರದೇಶ)
ಮೊದಲ 1 ಕಿ.ವ್ಯಾ.ಗೆ ರೂ 60 ಕಿ.ವ್ಯಾ.ಗೆ ರೂ.45 ಕಿ.ವ್ಯಾ.ಗೆ
ನಂತರದ ಹೆಚ್ಚುವರಿ ಕಿ.ವ್ಯಾ.ಗೆ ರೂ 70 ಕಿ.ವ್ಯಾ.ಗೆ ರೂ.60 ಕಿ.ವ್ಯಾ.ಗೆ

 ವಿದ್ಯುತ್ ಬಳಕೆ ಶುಲ್ಕ

1 ತಿಂಗಳಿಗೆ ಅನ್ವಯಿಸುವ ಸ್ಲ್ಯಾಬ್ 2 ತಿಂಗಳಿಗೆ ಅನ್ವಯಿಸುವ ಸ್ಲ್ಯಾಬ್ ದರ ಪ್ರತಿ ಯುನಿಟ್ಗೆ

(ನಗರ ಪ್ರದೇಶ)

ದರ ಪ್ರತಿ ಯುನಿಟ್ಗೆ

(ಗ್ರಾಮೀಣ ಪ್ರದೇಶ)

1ನೇ SLAB 30 ಯೂನಿಟ್ ಗಳು 60 ಯೂನಿಟ್ ಗಳು ರೂ. 3.70 ರೂ 3.60
2ನೇ SLAB 70 ಯೂನಿಟ್ ಗಳು 140 ಯೂನಿಟ್ ಗಳು ರೂ 5.20/- ರೂ.. 4.90/-
3ನೇ SLAB 100 ಯೂನಿಟ್ ಗಳು 200 ಯೂನಿಟ್ ಗಳು ರೂ. 6.75/- ರೂ.. 6.45/-
4ನೇ SLAB 200 ಯೂನಿಟ್ ಗಳಿಂತ ಅಧಿಕ 400 ಯೂನಿಟ್ ಗಳಿಂತ ಅಧಿಕ ರೂ. 7.80/- ರೂ. 7.30/-

ಬಿಲ್ ಸ್ವರೂಪಕ್ಕೆ ಈ ಚಿತ್ರ ನೋಡಿರಿ.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ