ಇತರ ಸುದ್ದಿಗಳಿಗೆ ಈ ವಾಟ್ಸಾಪ್ ಗುಂಪಿಗೆ ಸೇರಬಹುದು. ಕ್ಲಿಕ್ ಮಾಡಿರಿ
https://chat.whatsapp.com/HEamC5PR5BQ1pNoRgq3yx4
ಯಾವುದೇ ಸಭೆ ನಡೆಸದೇ ಚರ್ಚೆ ಮಾಡದೇ ರೈತರ ಅಭಿಪ್ರಾಯ ಕೇಳದೇ ತಿದ್ದುಪಡಿ ಮಾಡುವುದು ಸಾಧು ಅಲ್ಲ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಹೇಳಿದ್ದಾರೆ.
ರೈತರ ಶ್ರೇಯೋಭಿವೃದ್ದಿಗಾಗಿ ಎ.ಪಿಎಂ.ಸಿ. ಗಳನ್ನು ರಚನೆ ಮಾಡಿದ್ದರೂ ಪೂರ್ಣವಾಗಿ ರೈತರ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ನೀಡಲು ಸಾಧ್ಯವಾಗಿಲ್ಲ. ಇ. ಮಾರುಕಟ್ಟೆ ವ್ಯವಸ್ಥೆಯು ಕೂಡ ರೈತರ ಪಾಲಿಗೆ ಗಗನಕುಸುಮವಾಗಿದೆ.ಇಂತಹ ಸಂದರ್ಭದಲ್ಲಿ ಯಾವುದೇ ಸಭೆ ನಡೆಸದೇ ಚರ್ಚೆ ಮಾಡದೇ ರೈತರ ಅಭಿಪ್ರಾಯ ಕೇಳದೇ ತಿದ್ದುಪಡಿ ಮಾಡುವುದು ಸಾಧು ಅಲ್ಲ. ಇದನ್ನು ರಾಜ್ಯ ರೈತ ಸಂಘ ವೀರೊಧಿಸುತ್ತದೆ. ಮತ್ತು ಹೋರಾಟ ರೂಪಿಸಲು ನಿರ್ಣಯ ಕೈಗೊಳ್ಳತ್ತದೆ ಎಂದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.