ಕೋವಿಡ್ ವಾರಿಯರ್ ಆಗಿ ದುಡಿಯುವವರೀಗ ಎಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಅವರಲ್ಲಿ ಒಬ್ಬರು ಸುಳ್ಯ ತಾಲೂಕಿನ ಮಡಪ್ಪಾಡಿಯ ಭುವನೇಶ್ವರಿ (ಭುವನಾ) ಭರತ್ ಬಿ.ಸಿ.ರೋಡಿನ ನಿವಾಸಿಯೂ ಹೌದು.
ಎಂಟು ವರ್ಷಗಳಿಂದ ಮಂಗಳೂರಿನ ವೆನ್ಲಾಕ್ ನಲ್ಲಿ ನರ್ಸ್ ಆಗಿ ದುಡಿಯುತ್ತಿರುವ ಇವರು ಎರಡೂವರೆ ತಿಂಗಳಿಂದ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಪಾಸಿಟಿವ್ ವಾರ್ಡ್, ಐಸಿಯುನಲ್ಲಿ ಕೆಲಸ ಮಾಡುವ ಇವರು ಪ್ರತಿದಿನ ನಾಲ್ಕು ಗಂಟೆ ಪಿಪಿಇ ಕಿಟ್ ಧರಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಿ.ಸಿ.ರೋಡಿನ SCDCC ಬ್ಯಾಂಕಿನ ಉದ್ಯೋಗಿ ಭರತ್ ಗೌಡ ಇವರ ಪತಿ. ಮೊಡಂಕಾಪಿನ ನಿವಾಸಿಯಾಗಿರುವ ಭುವನೇಶ್ವರಿ ಸದ್ಯ ಮನೆಗೆ ಹೋಗುವ ಅವಕಾಶ ಇಲ್ಲದಿದ್ದರೂ ಕೊರೊನಾ ದೂರಗೊಳಿಸಲು ಕೋವಿಡ್ ವಾರಿಯರ್ ಆಗಿ ಶ್ರಮಿಸುತ್ತಾ ಗಮನ ಸೆಳೆದಿದ್ದಾರೆ. ಜಿಲ್ಲೆಯಲ್ಲಿ ಗುಣಮುಖರಾಗಿ ತೆರಳುವ ರೋಗಿಗಳ ಶುಭ ಹಾರೈಕೆಗಳಿಂದ ಮತ್ತಷ್ಟು ಉತ್ಸಾಹದಿಂದ ಕೆಲಸ ನಿರ್ವಹಿಸುವ ಇವರ ಸೇವೆ ಗಮನಾರ್ಹ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…