ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತು ಯಾವುದೇ ಕೋವಿಡ್ ಕೇಸ್ ಪಾಸಿಟಿವ್ ಎಂದು ನಮೂದಾಗಿಲ್ಲ. ಸೋಮವಾರ ಬಂಟ್ವಾಳದ 33 ವರ್ಷದ ಮಹಿಳೆ (ಪಿ-489) ಗುಣಮುಖರಾಗಿದ್ದು, ವೆನ್ಲಾಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇವರು ಬಂಟ್ವಾಳ ಕಸ್ಬಾ ಗ್ರಾಮದಲ್ಲಿ ಕೋವಿಡ್ ಗೆ ದಾಖಲಾಗಿ ಮೃತಪಟ್ಟ ಮಹಿಳೆಯ ಮಗಳು. ಸೋಮವಾರದ ವರದಿಯಂತೆ ವೆನ್ಲಾಕ್ ಆಸ್ಪತ್ರೆಯಲ್ಲಿ 14 ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು 12 ರೋಗಿಗಳ ಸ್ಥಿತಿ ತೃಪ್ತಿಕರವಾಗಿದೆ. ಕುಲಶೇಖರದ 80 ವರ್ಷದ ವೃದ್ಧೆ ಅಧಿಕ ರಕ್ತದೊತ್ತಡ, ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಆರೋಗ್ಯ ಸ್ಥಿತಿ ನಾಜೂಕಾಗಿದ್ದರೆ, ಬೋಳೂರು ನಿವಾಸಿ 58ರ ಮಹಿಳೆ ಮೆದುಳಿನ ಸೋಂಕಿನಿಂದ ಬಳಲುತ್ತಿದ್ದು ಐಸಿಯುನಲ್ಲಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಜಿಲ್ಲೆಯ ವಿವರ ಹೀಗಿದೆ:
ಸೋಮವಾಋ 124 ಮಂದಿಯ ವರದಿಗಳು ಬಂದಿದ್ದು ಎಲ್ಲವೂ ನೆಗೆಟಿವ್ ಆಗಿದೆ. 68 ಮಂದಿಯ ವರದಿಯನ್ನು ಕಳಿಸಲಾಗಿದೆ. ಒಟ್ಟು 128 ಮಂದಿ ವರದಿ ಬರಲು ಬಾಕಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯ 14 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ. 3 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 31 ಪಾಸಿಟಿವ್ ಪ್ರಕರಣಗಳು ಇದುವರೆಗೆ ಬಂದಿದ್ದು, ಇವರ ಪೈಕಿ 6 ಮಂದಿ ಅನ್ಯರಾಜ್ಯ, ಜಿಲ್ಲೆಯವರು.
ರಾಜ್ಯದ ವಿವರ ಹೀಗಿದೆ:
ರಾಜ್ಯದಲ್ಲಿ ಒಟ್ಟು 14 ಸೋಂಕಿತರು ಇವತ್ತು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 862ಕ್ಕೆ ಏರಿದೆ. ಹೊಸ ಜಾಗಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿರುವುದು ಆತಂಕಕಾರಿವಿಷಯ. ವಿವರ ಹೀಗಿದೆ. ದಾವಣಗೆರೆ 03, ಬಾಗಲಕೋಟೆ 02,ಬೀದರ್ 02, ಬೆಂಗಳೂರು 02, ಹಾವೇರಿ 01, ಕಲಬುರ್ಗಿ 01, ವಿಜಯಪುರ 01, ಹಾಸನ 01, ಮಂಡ್ಯ 01
ಬಂಟ್ವಾಳ ತಾಲೂಕಿನ ವಿವರ ಹೀಗಿದೆ:
ಬಂಟ್ವಾಳ ತಾಲೂಕಿನಲ್ಲಿ ಒಟ್ಟು ಸೋಂಕಿತರ ಪೈಕಿ 3 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 3 ಮಂದಿ ಮೃತಪಟ್ಟಿದ್ದಾರೆ. ಒಂದು ಮನೆಯ 4, ಮತ್ತೊಂದು ಮನೆಯ 1 ಸೇರಿ ಬಂಟ್ವಾಳದಲ್ಲಿ 5 ಮಂದಿ, ನರಿಕೊಂಬಿನ ಒಬ್ಬರು ಒಟ್ಟು 6 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತರ ಸುದ್ದಿಗಳಿಗೆ ಈ ವಾಟ್ಸಾಪ್ ಗುಂಪಿಗೆ ಸೇರಬಹುದು. ಕ್ಲಿಕ್ ಮಾಡಿ ಸೇರಿ
https://chat.whatsapp.com/HEamC5PR5BQ1pNoRgq3yx4
Harish Mambady2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ