ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಮೂರು ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಅವರೆಲ್ಲರೂ ಬಂಟ್ವಾಳದವರು ಎಂಬುದು ಆತಂಕಕಾರಿ.
ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷನಿಗೆ ಸೋಂಕು ದೃಢಪಟ್ಟಿರುವುದಾಗಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. 30 ವರ್ಷದ ಪುರುಷ (ಬಂಟ್ವಾಳ), 60 ವರ್ಷದ ಮಹಿಳೆ (ಬಂಟ್ವಾಳ), 70 ವರ್ಷದ ಮಹಿಳೆ (ಬಂಟ್ವಾಳ)ಗೆ ಸೋಂಕು ದೃಢಪಟ್ಟಿರುವುದಾಗಿ ಪ್ರಕಟಣೆ ತಿಳಿಸಿದೆ.
ಮೇ.1ರಂದು ಕೊರೋನ ಪತ್ತೆಯಾಗಿದ್ದ 69 ವರ್ಷದ P-578 ವೃದ್ದನಿಂದ ಸೋಂಕು ತಗಲಿದೆ. ಬಂಟ್ವಾಳದಲ್ಲಿ ಮೃತಪಟ್ಟ P-390 ಮಹಿಳೆಯಿಂದ ವೃದ್ದನಿಗೆ ಸೋಂಕು ತಗಲಿತ್ತು. ವೃದ್ದನಿಗೆ ಪಾಸಿಟಿವ್ ಹಿನ್ನೆಲೆ ಆ ಮನೆಯ 8 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇವರಲ್ಲಿ ಮೂವರಿಗೆ ಸೋಂಕು ತಗಲಿದೆ ಎನ್ನಲಾಗಿದೆ.
ಸದ್ಯ ದ.ಕ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15 ಕ್ಕೆ ಏರಿಕೆಯಾದಂತಾಗಿದೆ. ದ.ಕ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಪಾಸಿಟಿವ್ ಪ್ರಕರಣಗಳು 31 ಮೃತಪಟ್ಟವರ ಸಂಖ್ಯೆ 3. ಡಿಸ್ಚಾರ್ಜ್ ಆದವರ ಸಂಖ್ಯೆ 13.
ಮೂರು ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಬಂಟ್ವಾಳ ಪೇಟೆಯಲ್ಲೇ 9 ಪ್ರಕರಣಗಳು ಹಾಗೂ ತಾಲೂಕಿನಲ್ಲಿ 12 ಪ್ರಕರಣಗಳು ದಾಖಲಾದಂತಾಗಿದೆ. ಸಜಿಪನಡು ಮತ್ತು ತುಂಬೆ ಪಾಸಿಟಿವ್ ಕೇಸ್ ಬಂದಿದ್ದು, ಅವರೀಗ ಡಿಸ್ಚಾರ್ಜ್ ಆಗಿದ್ದಾರೆ. ನರಿಕೊಂಬು ಗ್ರಾಮದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳದ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಇಬ್ಬರು ಪುರುಷರು, ಮೂವರು ಮಹಿಳೆಯರು ಮತ್ತು ಒಬ್ಬ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳು: 12. ನರಿಕೊಂಬು ಗ್ರಾಮ (ನಾಯಿಲ):1 ಮಹಿಳೆ. (ಈ ಪ್ರದೇಶವೀಗ ಸೀಲ್ ಡೌನ್). ಸಜೀಪನಡು ಗ್ರಾಮ (10 ತಿಂಗಳ ಮಗು ಗುಣಮುಖ). ತುಂಬೆ (ಯುವಕ ಗುಣಮುಖ). ಬಂಟ್ವಾಳ ಪೇಟೆ ಕಸ್ಬಾ ಗ್ರಾಮದ 9 (ಮೂರು ಮನೆಗಳ ಸದಸ್ಯರು. ಇವರಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ).
ಬಂಟ್ವಾಳ ಕಸ್ಬಾ ಗ್ರಾಮದ ಪ್ರಕರಣಗಳು ಇವು: ಮನೆ 1: ಮಹಿಳೆ, ಅವರ ಅತ್ತೆ ಮತ್ತು ಅವರ 16 ವರ್ಷದ ಮಗಳು. (ಒಟ್ಟು ಮೂವರಿಗೆ ಪಾಸಿಟಿವ್). ಇವರ ಪೈಕಿ, ಅತ್ತೆ, ಸೊಸೆ ಸಾವನ್ನಪ್ಪಿದ್ದಾರೆ. ಮನೆ.2: ಮಹಿಳೆ ಮತ್ತು ಅವರ ಮಗಳು. (ಒಟ್ಟು 2 ಪಾಸಿಟಿವ್) ಇವರ ಪೈಕಿ ಮಹಿಳೆ ಸಾವನ್ನಪ್ಪಿದ್ದಾರೆ. ಮನೆ.3: ವೃದ್ಧ, ಅವರ ಮನೆ ಸದಸ್ಯರಾದ ಪುರುಷ, ಇಬ್ಬರು ಮಹಿಳೆಯರು (ಒಟ್ಟು ನಾಲ್ವರಿಗೆ ಪಾಸಿಟಿವ್). ಫಸ್ಟ್ ನ್ಯೂರೋ ಲಿಂಕ್ ಇರುವ ಪ್ರಕರಣಗಳು ಬಂಟ್ವಾಳ ತಾಲೂಕು: 10.
ಕರ್ನಾಟಕದಲ್ಲಿ ಇಂದು 36ಸೋಂಕಿತರು ಪತ್ತೆ ಒಟ್ಟು ಸೋಂಕಿತರ ಸಂಖ್ಯೆ 789 ಕ್ಕೆ ಏರಿಕೆ ಆಗಿದೆ. ಬೆಂಗಳೂರು 12, ಉತ್ತರಕನ್ನಡ 07, ದಾವಣಗೆರೆ 06, ಚಿತ್ರದುರ್ಗ 03, ಬೀದರ್ 03, ದಕ್ಷಿಣಕನ್ನಡ 03, ತುಮಕೂರು 01, ವಿಜಯಪುರ 01
ದಕ್ಷಿಣ ಕನ್ನಡ ಜಿಲ್ಲೆಯ ಪ್ರಕರಣಗಳು ಇವು.: 30 ವರ್ಷದ ಪುರುಷ (ಬಂಟ್ವಾಳ), 60 ವರ್ಷದ ಮಹಿಳೆ (ಬಂಟ್ವಾಳ), 70 ವರ್ಷದ ಮಹಿಳೆ (ಬಂಟ್ವಾಳ)