ಬಂಟ್ವಾಳ

ಸರ್ಕಾರದ ಸ್ಪಷ್ಟ ನೀತಿ ಇದ್ದರಷ್ಟೇ ಎಲ್ಲ ಕಾರ್ಮಿಕರಿಗೂ ನೆರವು ಸಾಧ್ಯ: ರಮಾನಾಥ ರೈ ಸಲಹೆ

ರಾಜ್ಯ ಸರಕಾರ ಕಾರ್ಮಿಕರ ಪರವಾಗಿ ಘೋಷಿಸಿದ ನೆರವು ಎಲ್ಲ ಕಾರ್ಮಿಕರನ್ನೂ ತಲುಪದಿದ್ದರೆ ಘೋಷಣೆಗಷ್ಟೇ ಸೀಮಿತವಾದೀತು. ನಿಬಂಧನೆಗಳನ್ನು ಸಡಿಲಿಸಿ, ಪ್ರತಿಯೊಬ್ಬ ಕಾರ್ಮಿಕರಿಗೂ ತಲುಪುವ ಕೆಲಸವಾಗಬೇಕು ಎಂಬುದು ನನ್ನ ಸಲಹೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

 

ಪತ್ರಿಕಾ ಹೇಳಿಕೆ ನೀಡಿರುವ ಅವರು,ಸರಕಾರದ ನೆರವಿನಲ್ಲಿ ಹಲವು ಷರತ್ತುಗಳು ಇರುವ ಕಾರಣ, ಹಲವಾರು ಕಾರ್ಮಿಕರು ನೆರವಿನಿಂದ ವಂಚಿತರಾಗುವ ಸಾಧ್ಯತೆ ಇದೆ. ಪ್ರತಿಯೊಬ್ಬ ಕಾರ್ಮಿಕರನ ಪರವಾಗಿಯೂ ಸರಕಾರ ನಿಲ್ಲಬೇಕು, ಇವರ ಕುರಿತು ಸ್ಪಷ್ಟ ನೀತಿ ಅನುಸರಿಸಬೇಕು. ಕಾರ್ಮಿಕರ ಕಲ್ಯಾಣಕ್ಕಾಗಿಯೇ ಇರುವ ಕೋಟ್ಯಂತರ ರೂಪಾಯಿ ನಿಧಿಯನ್ನು ಅವರಿಗಾಗಿಯೇ ಬಳಸಲು ಇದು ಸಕಾಲ. ಸಂಘಟಿತರಾಗಿರುವ ಕಾರ್ಮಿಕರೂ ಇಂದು ಲಾಕ್ ಡೌನ್ ನಿಂದ ಕೆಲಸವಿಲ್ಲದೆ ತೊಂದರೆ ಅನುಭವಿಸುತ್ತಿರುವ ವೇಳೆಯಲ್ಲಿ ಅವರ ಪಿಎಫ್, ಇಎಸ್ ಐಯನ್ನು ಬಳಸಲು ಅವಕಾಶ ಮಾಡಿಕೊಡಬೇಕು. ಇದಕ್ಕೆ ಕಾನೂನು ತೊಡಕಿದ್ದರೆ ಅವುಗಳನ್ನು ನಿವಾರಿಸಬೇಕು. ಇಂಥ ವಿಷಯಗಳಲ್ಲಿ ಸ್ಪಷ್ಟ ತೀರ್ಮಾನಗಳನ್ನು ಕೈಗೊಳ್ಳುವುದು ಅವಶ್ಯಕ ಎಂದು ರೈ ಹೇಳಿದ್ದಾರೆ.

ಹೊರರಾಜ್ಯದಲ್ಲಿರುವ ಜನರಿಗೆ ನೆರವಾಗುವ ಕಾರ್ಯವನ್ನು ರಾಜ್ಯ ಸರಕಾರ ಮಾಡಬೇಕು. ಅವರನ್ನು ಅಲ್ಲಿಂದ ತಪಾಸಣೆಗೊಳಪಡಿಸಿ, ಬಸ್ಸಿನಲ್ಲೇ ಬಂದಿಳಿದ ಬಳಿಕ ಅವರ ತಪಾಸಣೆ ನಡೆಸಿ ಕ್ವಾರಂಟೈನ್ ನಲ್ಲಿಡುವ ಕಾರ್ಯವನ್ನೂ ಮಾಡಬಹುದು. ಅಧಿಕೃತವಾಗಿಯೇ ಅವರನ್ನು ನಿಯಮಾವಳಿ ಪಾಲಿಸಿ ಊರಿಗೆ ಕರೆತರುವ ವ್ಯವಸ್ಥೆಯನ್ನು ಕಲ್ಪಿಸಬಹುದು ಎಂದು ರೈ ಸಲಹೆ ನೀಡಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ