ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮದ ಮುಂಡೆಗುರಿ ನಿವಾಸಿ ಸುಮಾರು 86 ವರ್ಷ ಪ್ರಾಯದ ಸುಬ್ಬ ಭಂಡಾರಿ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಇವರು ಅಮ್ಟಾಡಿ ಗ್ರಾಮ ಪಂಚಾಯತ್ ಸದಸ್ಯೆ ಪತ್ನಿ ರತಿ.ಎಸ್.ಭಂಡಾರಿ, ಇಬ್ಬರು ಪುತ್ರಿಯರು, ನಾಲ್ವರು ಪುತ್ರರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.
ಬಾಲ್ಯದಿಂದಲೇ ಕಮ್ಯೂನಿಸ್ಟ್ ಪಕ್ಷದ ಸಿದ್ಧಾಂತಕ್ಕೆ ಪ್ರೇರಿತರಾಗಿ ದುಡಿಯುವ ವರ್ಗದ ಹೋರಾಟದ ಮುಂಚೂಣಿಯಲ್ಲಿ ಕೆಲಸ ಮಾಡುತ್ತಾ ಭಾರತ ಕಮ್ಯೂನಿಸ್ಟ್ ಪಕ್ಷದಿಂದ ಪ್ರತಿನಿಧಿಕರಿಸಿ ಅಮ್ಟಾಡಿ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಅಮ್ಟಾಡಿ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷರಾಗಿ, ಅಮ್ಟಾಡಿ ಸಾರ್ವಜನಿಕ ಸ್ಮಶಾನ ಸಮಿತಿಯ ಅಧ್ಯಕ್ಷರಾಗಿ, ಯುವಜನ ವ್ಯಾಯಾಮ ಶಾಲೆಯ ಸ್ಥಾಪಕ ಅಧ್ಯಕ್ಷರಾಗಿಯೂ ದಶಕಗಳ ಕಾಲ ಸೇವೆ ಸಲ್ಲಿಸಿದ್ದು ಅಮ್ಟಾಡಿ ನಲಿಕೆಮಾರು ಸರಕಾರಿ ಹಿ.ಪ್ರಾ ಶಾಲೆಯ ಸ್ಥಾಪನೆಗೆ ಊರಿನ ಗಣ್ಯರ ಜತೆ ಸೇರಿ ಮುಖ್ಯ ಪಾತ್ರ ವಹಿಸಿದ್ದರು.
ಸಿಪಿಐ ಜಿಲ್ಲಾ ಸಹಕಾರ್‍ಯದರ್ಶಿ ಬಿ.ಶೇಖರ್, ಸಿಪಿಐ ಜಿಲ್ಲಾ ನಾಯಕರಾದ ಸುರೇಶ್ ಕುಮಾರ್, ಎಂ.ಕರುಣಾಕರ್, ಬಿ.ಬಾಬು ಭಂಡಾರಿ, ಶುಭ ಬೀಡಿ ಮಾಲಕರಾದ ಭುವನೇಶ್ ಪಚ್ಚಿನಡ್ಕ, ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಶೆಟ್ಟಿ ಮುಂತಾತದವರು ಅಂತಿಮ ದರ್ಶನ ಪಡೆದರು. ಸಿಪಿಐ ಜಿಲ್ಲಾ ಕಾರ್‍ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾ ಕಾರ್‍ಯದರ್ಶಿ ಎಚ್.ವಿ.ರಾವ್, ಮಾಜೀ ಸಚಿವ ಬಿ.ರಮಾನಾಥ ರೈ ಸಂತಾಪ ಸೂಚಿಸಿದ್ದಾರೆ.