ಮೇ8ರ ಮಧ್ಯಾಹ್ನ 12 ಗಂಟೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ವರದಿಯಂತೆ ರಾಜ್ಯದಲ್ಲಿ ಒಟ್ಟು 45 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟಾರೆಯಾಗಿ 750 ಪ್ರಕರಣಗಳು ರಾಜ್ಯದಲ್ಲಿ ವರದಿಯಾದಂತಾಗಿದೆ.
ಇವುಗಳ ಪೈಕಿ 30 ಮಂದಿ ಮೃತಪಟ್ಟಿದ್ದು, 371 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಭಟ್ಕಳವೊಂದರಲ್ಲೇ 12 ಕೇಸುಗಳು ಬಂದಿವೆ.
ಆತಂಕಕಾರಿ ಅಂಶ ವೆಂದರೆ, ಇಂದು ಪತ್ತೆಯಾದ 4 ಪ್ರಕರಣಗಳು ಹೇಗೆ ಬಂತು ಎಂಬುದು ಇನ್ನೂ ಗೊತ್ತಾಗಬೇಕಷ್ಟೇ.
ದಾವಣಗೆರೆ 14, ಉತ್ತರಕನ್ನಡ 12, ಬೆಳಗಾವಿ 11, ಬೆಂಗಳೂರು 07, ಬಳ್ಳಾರಿ 01 ಪ್ರಕರಣಗಳು ಪತ್ತೆಯಾಗಿದ್ದು, ಸಂಜೆ ವೇಳೆ ಹೆಚ್ಚಳವಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…