ಪ್ರಮುಖ ಸುದ್ದಿಗಳು

ದಕ್ಷಿಣ ಕನ್ನಡ: ಇನ್ನೂ 217 ಫಲಿತಾಂಶ ಬಾಕಿ, ಇಂದು 3 ಪಾಸಿಟಿವ್

ಬೋಳೂರಿನ ನಿವಾಸಿಗಳಾದ 38 ವರ್ಷದ ಮಹಿಳೆ, 11 ವಯಸ್ಸಿನ ಬಾಲಕಿ ಹಾಗೂ ಬಂಟ್ವಾಳ ಕಸ್ಬಾ ಗ್ರಾಮದ 16 ವರ್ಷದ ಬಾಲಕಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ವೆನ್ಲಾಕ್ ಆಸ್ಪತ್ರೆ ವರದಿಯಂತೆ ಒಟ್ಟು 12 ಕೋವಿಡ್ ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, 8 ರೋಗಿಗಳ ಸ್ಥಿತಿ ತೃಪ್ತಿಕರವಾಗಿರುತ್ತದೆ. 80 ವರ್ಷದ ಕುಲಶೇಖರ ನಿವಾಸಿ, 58 ವರ್ಷದ ಬೋಳೂರು ನಿವಾಸಿ ಆರೋಗ್ಯ ಸ್ಥಿತಿ ನಾಜೂಕಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಟ್ಟು ವಿವರ ಹೀಗಿದೆ.

  • ಇದುವರೆಗೆ ಕಳುಹಿಸಲಾದ ಗಂಟಲು ದ್ರವ ಮಾದರಿಗಳು ಒಟ್ಟು: 3916
  • ವರದಿ ಬಂದದ್ದು: 3699. ಇವುಗಳ ಪೈಕಿ 3671 ನೆಗೆಟಿವ್. 28 ಪಾಸಿಟಿವ್. ಚಿಕಿತ್ಸೆಯ ಬಳಿಕ ಡಿಸ್ಚಾರ್ಜ್ ಆದ ರೋಗಿಗಳ ಸಂಖ್ಯೆ 13. ಚಿಕಿತ್ಸೆ ಪಡೆಯುತ್ತಿರುವವರು 12. ಮೃತಪಟ್ಟವರು 3.
  • ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ ಪಾಸಿಟಿವ್ ಕೇಸುಗಳ ಸಂಖ್ಯೆ: 22
  • ಹೊರಜಿಲ್ಲೆ/ರಾಜ್ಯದ ಕೋವಿಡ್ ಕೇಸುಗಳು ದ.ಕ.ಜಿಲ್ಲೆಯಲ್ಲಿ ಚಿಕಿತ್ಸೆ ಪಡೆದದ್ದು : 6
  • ಇಂದು ಕಳುಹಿಸಲಾದ ಸ್ಯಾಂಪಲ್ ಗಳು: 137
  • ನಿಗಾದಲ್ಲಿ ಇರುವವರು: 27
  • ಫಲಿತಾಂಶಕ್ಕೆ ಬಾಕಿ: 217

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts