ತಮಗೆ ಕೇರಳ ಮಾದರಿ ಉದ್ಯೋಗ ಭತ್ಯೆ ನೀಡಬೇಕು ಎಂದು ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕರ ಸಂಘ ಬಂಟ್ವಾಳ ಅಧ್ಯಕ್ಷ ಪ್ರಭಾಕರ ದೈವಗುಡ್ಡೆ ಹೇಳಿದ್ದಾರೆ.
ಬಾಡಿಗೆ ಇಲ್ಲದೆ ಟೂರಿಸ್ಟ್ ಕಾರು ಚಾಲಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸಾಲ ಮಾಡಿ ವಾಹನಗಳನ್ನು ಖರೀದಿಸಿದವರು ಬ್ಯಾಂಕಿನ ಕಂತು ಕಟ್ಟಲು ಪರದಾಡುತ್ತಿದ್ದಾರೆ. ಇನ್ಶೂರೆನ್ಸ್ ಕಟ್ಟಲೂ ಕೆಲವರಿಗೆ ಅಸಾಧ್ಯವಾದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ವಿಮೆ ಕಂತಿನಲ್ಲಿ 3 ತಿಂಗಳ ಅವಧಿಯದ್ದನ್ನು ಕಡಿತಗೊಳಿಸಬೇಕು, ಬ್ಯಾಂಕಿನ ಕಂತಿನಲ್ಲಿ ರಿಯಾಯಿತಿ ತೋರಬೇಕು, ಕೇರಳ ರಾಜ್ಯ ಸರಕಾರ ನೀಡಿದ ಮಾದರಿಯಲ್ಲಿ ಉದ್ಯೋಗ ಭತ್ಯೆಯನ್ನು ಒದಗಿಸಬೇಕು ಎಂದವರು ಒತ್ತಾಯಿಸಿದ್ದಾರೆ.