ಬಂಟ್ವಾಳ

ಲಾಕ್ ಡೌನ್ ಸಡಿಲಿಕೆ: ರಸ್ತೆಗಿಳಿದ ಜನರು, ವಾಹನಗಳು, ತೆರೆದ ವ್ಯಾಪಾರಿ ಮಳಿಗೆಗಳು

ಬೆಳಗಿನ ಅವಧಿಯಲ್ಲಿ ಮೇಲ್ಕಾರ್ ಪೇಟೆಯಲ್ಲಿ ವಾಹನ ಸಂಚಾರ ಹೀಗಿತ್ತು. ಚಿತ್ರ: ಲಕ್ಷ್ಮಣ್ ಬಲ್ಕಟ್ಟ, ಪೂಜಾ ಸ್ಟುಡಿಯೋ, ಮೇಲ್ಕಾರ್

ಬಿ.ಸಿ.ರೋಡ್, ಕೈಕಂಬ, ಬಂಟ್ವಾಳ ಪೇಟೆಯ ಕೆಲ ಭಾಗ, ಮೇಲ್ಕಾರ್, ವಿಟ್ಲ ಸಹಿತ ಬಂಟ್ವಾಳ ತಾಲೂಕಿನ ಹಲವು ಭಾಗಗಳಲ್ಲಿ ಬೆಳಗ್ಗಿನಿಂದಲೇ ಜನಸಂಚಾರ ಕಂಡುಬಂತು. ಕೆಲವು ಅಂಗಡಿ ಮಳಿಗೆಗಳು ತೆರೆದ ಕಾರಣ ದ್ವಿಚಕ್ರ ಹಾಗೂ ಸ್ವಂತ ವಾಹನಗಳಲ್ಲಿ ಆಗಮಿಸುವವರು, ಆಟೊರಿಕ್ಷಾ, ಟ್ಯಾಕ್ಸಿಗಳಲ್ಲಿ ಬರುವವರ ಸಂಖ್ಯೆ ಜಾಸ್ತಿ ಆಗಿತ್ತು. ಸಂಚಾರ ಅವಧಿ ಬೆಳಗ್ಗೆ 7ರಿಂದ ಸಂಜೆಯವರೆಗೂ ಇದ್ದ ಕಾರಣ, ಕಳೆದ ಒಂದೂವರೆ ತಿಂಗಳಲ್ಲಿ ಮನೆಯೊಳಗಿದ್ದವರಲ್ಲಿ ಹೆಚ್ಚಿನವರು ರಸ್ತೆಯ ಬಳಿ ಬರುತ್ತಿರುವುದು ಕಂಡುಬಂತು. ಆಟೊ ಸ್ಟ್ಯಾಂಡ್ ಗಳಲ್ಲಿ ಎಂದಿನಂತೆ ರಿಕ್ಷಾಗಳ ನಿಲುಗಡೆ ಇದ್ದರೆ, ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಟೂರಿಸ್ಟ್ ಟ್ಯಾಕ್ಸಿಗಳು ಬಾಡಿಗೆಗಾಗಿ ಗ್ರಾಹಕರನ್ನು ಕಾಯುತ್ತಿದ್ದವು. ಬ್ಯಾಂಕು ಸಹಿತ ಅಂಗಡಿ ಮಳಿಗೆಗಳಲ್ಲಿ ಜನರ ಸಂಖ್ಯೆ ಹೆಚ್ಚಳವಾಗಿದ್ದು, ಮದ್ಯದಂಗಡಿಗಳ ಕಡೆಗೂ ಜನರು ಹೆಜ್ಜೆ ಹಾಕುತ್ತಿರುವುದು ಸೋಮವಾರ ಕಂಡುಬಂತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts