ಪ್ರಮುಖ ಸುದ್ದಿಗಳು

ಲಾಕ್ ಡೌನ್ ಸಡಿಲಿಕೆ ಆಗಿದೆ ಅಂದ್ರೆ ಕೊರೊನಾ ನಿರ್ಮೂಲನೆ ಆಗಿದೆ ಅಂತಲ್ಲ

ನಿಯಮಪಾಲನೆ ಕಟ್ಟುನಿಟ್ಟು ವಹಿಸಿ, ಮಾಸ್ಕ್ ಧರಿಸಿ –ಜಿಲ್ಲಾಧಿಕಾರಿ ಸಿಂಧೂ ರೂಪೇಶ್

ಜಾಹೀರಾತು

ಲಾಕ್ ಡೌನ್ ಸಡಿಲಿಕೆ ಆಗಿದೆ ಅಂದ್ರೆ ರೋಗ ಹೋರಟುಹೋಯ್ತು ಅಂತಲ್ಲ, ಸ್ವನಿಯಂತ್ರಣ, ನಮ್ಮ ಜವಾಬ್ದಾರಿಯನ್ನು ಪಾಲಿಸುವುದನ್ನು ಮುಂದುವರಿಸಬೇಕು. ನಮ್ಮ ವೈಯಕ್ತಿಕ, ಸಾಮಾಜಿಕ ಜವಾಬ್ದಾರಿಗಳನ್ನು ಅನುಸರಿಸಬೇಕು. ಕಡ್ಡಾಯ ಮಾಸ್ಕ್ ಧರಿಸಿ, ಅಂತರ ಕಾಪಾಡಿ, ನಿಯಮಪಾಲನೆ ಕಟ್ಟುನಿಟ್ಟುಗೊಳಿಸಿ.

ದ.ಕ.ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಹೀಗೆ.

ಈಗಾಗಲೇ ಹೊರಡಿಸಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ, ವಯಸ್ಕರಿದ್ದರೆ ಹೆಚ್ಚು ಕಾಳಜಿ ವಹಿಸಿ, ಅವರು ಮನೆಯಿಂದ ಹೊರಬಾರದಂತೆ ನೋಡಿಕೊಳ್ಳಿ ಎಂದವರು ಹೇಳಿದರು.

  • ಲಾಕ್ ಡೌನ್ ಸಡಿಲಿಕೆ ಆಗಿದೆ ಅಂದರೆ ಕೋವಿಡ್ ಸೋಂಕು ಸಂಪೂರ್ಣ ನಿರ್ಮೂಲನೆ ಆಗಿದೆ ಎಂದಲ್ಲ. ನಮ್ಮ ಜಿಲ್ಲೆಯಲ್ಲಿ ಇನ್ನೂ 9 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಮನೆಯಿಂದ ಹೊರಗೆ ಬರುವಾಗ ಮಾಸ್ಕ್ ಕಡ್ಡಾಯ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯ. ಅಂಗಡಿಗಳಲ್ಲೂ ಗುಂಪು ಗೂಡದಂತೆ ತಪ್ಪಿಸೋದು ಅಂಗಡಿಯವರ ಜವಾಬ್ದಾರಿ. ಅಲ್ಲದೆ ಕೈತೊಳೆಯುತ್ತಿರೋದು ಹಾಗೂ ಸ್ಯಾನಿಟೈಸರ್ ಬಳಸೋದು ಕಡ್ಡಾಯ
  • ಕಚೇರಿಗಳಲ್ಲಿಯೂ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿಕೊಳ್ಳಬೇಕು.
  • ಅನಾವಶ್ಯಕ ವಾಹನಗಳಲ್ಲಿ ತಿರುಗಾಡೋದು ಬೇಡ.
  • ಅಂತಾರಾಜ್ಯ ಪ್ರಯಾಣಕ್ಕೆ ಅವಕಾಶ ಕೋರಿ ಸಾಕಷ್ಟು ಮನವಿಗಳು ಬರುತ್ತಿದೆ. ಅದಕ್ಕೋಸ್ಕರ ವೆಬ್ ಸೈಟ್ ಓಪನ್ ಮಾಡಲಾಗಿದೆ. ಇದಕ್ಕೆ ರಿಜಿಸ್ಟ್ರೇಷನ್ ಕೂಡಾ ಆರಂಭವಾಗಿದೆ.
  • ಯುಎಸ್ಎ, ಯುಕೆ, ಕೆನಡಾ, ಸೌದಿ ಮುಂತಾದ ಕಡೆಗಳಿಂದ ಸುಮಾರು 10,000 ಮಂದಿ ಮೊದಲ ಸರದಿಯಲ್ಲಿ  ಬರುವವರಿದ್ದಾರೆ.
  • ಬೇರೆ ಜಿಲ್ಲೆ, ರಾಜ್ಯಗಳಿಂದ ಯಾರೇ ಬಂದಲ್ಲೂ ನಾವು ಚೆಕ್ ಪೋಸ್ಟ್ ಗಳಲ್ಲಿ ಸ್ಕ್ರೀನಿಂಗ್ ಮಾಡಿ 14 ದಿನಗಳ ಕಾಲ ಹೋಮ್ ಕ್ವಾರೆಂಟೈನ್ ಮಾಡುತ್ತಿದ್ದೇವೆ.
  • ಈಗಾಗಲೇ ನಾವು ತಲಪಾಡಿ, ಹೆಜಮಾಡಿ, ನಾರಾವಿ, ಗುಂಡ್ಯ, ಜಾಲ್ಸೂರು, ಕಲ್ಗುಂಡಿ ಹಾಗೂ ಚಾರ್ಮಾಡಿ ಮುಂತಾದ ಏಳು ಚೆಕ್ ಪೋಸ್ಟ್ ಗಳನ್ನು ಗುರುತಿಸಿದ್ದೇವೆ.

ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಎಸ್ಪಿ ಲಕ್ಷ್ಮೀಪ್ರಸಾದ್, ಮಂಗಳೂರು ಸಿಟಿ ಪೊಲೀಸ್ ಕಮೀಷನರ್ ಹರ್ಷ ಅವರು ನೀಡಿದ ವಿಡಿಯೋ ಸಂದೇಶದ ಲಿಂಕ್ ಇಲ್ಲಿದೆ. ಕ್ಲಿಕ್ ಮಾಡಿರಿ.

ಬಂಟ್ವಾಳನ್ಯೂಸ್ ನಿರಂತರವಾಗಿ ಓದಲು ಈ ಗುಂಪಿಗೆ ಸೇರಬಹುದು

https://chat.whatsapp.com/LNdS3qwTHVYLnGnKXmfSCn

ಈ ಸುದ್ದಿಗೆ ಸಂಬಂಧಿಸಿದ ಲಿಂಕ್ ಇದು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.