ಪ್ರಮುಖ ಸುದ್ದಿಗಳು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಯಾವುದಕ್ಕೆ ಅವಕಾಶ ಇದೆ, ಯಾವುದಕ್ಕಿಲ್ಲ?

ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ದ.ಕ ಜಿಲ್ಲೆಯಲ್ಲಿ ನಾಳೆಯಿಂದ ಅನುಮತಿಸಲಾದ ವ್ಯವಹಾರಗಳ ಕುರಿತು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಭಾನುವಾರ ಮಧ್ಯಾಹ್ನ ಪ್ರಕಟಣೆ ಹೊರಡಿಸಿದ್ದು ವಿವರ ಹೀಗಿದೆ.

ಇವುಗಳಲ್ಲಿ ಕಂಟೈನ್ಮೆಂಟ್ ವಲಯಕ್ಕೆ ಯಾವುದೇ ಅವಕಾಶಗಳೂ ಇಲ್ಲ. ಆದರೆ ಕಂಟೈನ್ಮೆಂಟ್ ವಲಯವನ್ನು ಹೊರತುಪಡಿಸಿ, ಉಳಿದ ಪ್ರದೇಶಗಳಿಗೆ ಯಾವುದಕ್ಕೆ ಅವಕಾಶ ಇದೆ, ಇಲ್ಲ ಎಂಬ ವಿವರ ಇಲ್ಲಿದೆ. ನೋಡಿ.

ಯಾವುದಕ್ಕೆ ಅವಕಾಶ ಇದೆ?

  • ಸಾರ್ವಜನಿಕರಿಗೆ ನಿರ್ದಿಷ್ಟ ಉದ್ದೇಶಕ್ಕಾಗಿ ಸಂಚರಿಸಲು ಅವಕಾಶ ಇದೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
  • ಆಟೊಗಳಲ್ಲಿ ಚಾಲಕ, ಮತ್ತು ಇಬ್ಬರು ಪ್ರಯಾಣಿಕರಿಗೆ ಅವಕಾಶ
  • ಟ್ಯಾಕ್ಸಿ ಯಲ್ಲಿ 1 ಚಾಲಕ, ಇಬ್ಬರು ಪ್ರಯಾಣಿಕರಿಗೆ ಅವಕಾಶ
  • ಈ ಕಾಮರ್ಸ್ ಮೂಲಕ ಅವಶ್ಯಕ ಸೇವೆಗೆ ಅವಕಾಶ
  • ಎಲ್ಲ ಸಿಂಗಲ್ ಶಾಪ್ ಗಳು, ವಸತಿ ಸಂಕೀರ್ಣದಲ್ಲಿರುವ ಅಂಗಡಿಗಳು ತೆರೆಯಲು ಅವಕಾಶ
  • ಕಟ್ಟಡ ಕಾಮಗಾರಿಗಳಿಗೆ ನಿಯಮ ಉಲ್ಲಂಘಿಸದೆ ಕೆಲಸ ಮಾಡಿಸಲು, ನರೇಗಾ ಕೆಲಸಗಳನ್ನು ನಿರ್ವಹಿಸಲು ಅವಕಾಶ
  • ಕೈಗಾರಿಕಾ ಕೆಲಸಗಳು, ಔಷಧೀಯ ಕಂಪನಿಗಳು, ಐಟಿ ಹಾರ್ಡ್ ವೇರ್, ಸೆಣಬು ಇತ್ಯಾದಿ ಆಯ್ದ ಕೈಗಾರಿಕೆಗಳಿಗೆ ಅವಕಾಶ
  • ಎಸ್ ಇ ಝಡ್, ಇಒಕ್ಯೂ, ಇಂಡಸ್ಟ್ರಿಯಲ್ ಎಸ್ಟೇಟ್, ಟೌನ್ ಶಿಪ್ ಗೆ ಅವಕಾಶ
  • ವಾಹನಗಳಿಗೆ ತೆರಳಲು ಅವಕಾಶವಿದೆ. ಆದರೆ ನಾಲ್ಕು ಚಕ್ರದ ವಾಹನದಲ್ಲಿ ಚಾಲಕನಲ್ಲದೆ ಇಬ್ಬರು, ದ್ವಿಚಕ್ರವಾದರೆ ಒಬ್ಬರಿಗಷ್ಟೇ ಸಂಚರಿಸಲು ಅವಕಾಶ
  • ಆನ್ಲೈನ್/distance learning ವ್ಯವಸ್ಥೆಗೆ ಅನುಮತಿ ಇರುತ್ತದೆ.
  • ಅಗತ್ಯ ಸೇವೆಗಳಾದ ಆಸ್ಪತ್ರೆ, ಕ್ಲಿನಿಕ್, ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ.
  • ಖಾಸಗಿ ವಾಹನಗಳಲ್ಲಿ ಸಂಚರಿಸಬಹುದು. (ಅಗತ್ಯವಿರುವ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ 4 ಚಕ್ರವಾಹನಗಳಲ್ಲಿ ವಾಹನ ಚಾಲಕ ಮತ್ತು ಗರಿಷ್ಠ 2 ಮಂದಿ ಮಾತ್ರ ಪ್ರಯಾಣಿಸಬಹುದು. ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರ ರಿಗೆ ಅವಕಾಶ ಇಲ್ಲ.)
  • ಕೈಗಾರಿಕಾ ಘಟಕಗಳಲ್ಲಿ ಅಗತ್ಯವಿರುವ ಮುಂಜಾಗರೂಕತಾ ಕ್ರಮ ಕೈಗೊಂಡು ಕಾರ್ಯಾಚರಣೆ ಪ್ರಾರಂಭಿಸಬಹುದು.
  • ಕಟ್ಟಡ ಹಾಗೂ ಇತರೆ ಕಾಮಗಾರಿ ಆರಂಭಿಸಬಹುದು.
  • ಶೇ.33 ಸಿಬ್ಬಂದಿಯೊಂದಿಗೆ ಖಾಸಗಿ ಕಚೇರಿಗಳು ಕಾರ್ಯಾರಂಭಿಸಬಹುದು.

ಯಾವುದಕ್ಕೆ ಅವಕಾಶ ಇಲ್ಲ?

  • ಕಂಟೈನ್ಮೆಂಟ್ ವಲಯ ಮತ್ತು ಅದರ ಹೊರವಲಯಗಳಲ್ಲೂ ಹೋಟೆಲ್, ರೆಸ್ಟೋರೆಂಟ್, ಹೆಚ್ಚು ಜನರು ಸೇರುವ ವ್ಯವಸ್ಥೆಗಳಾದ ಸಿನಿಮಾ ಹಾಲ್, ಮಾಲ್, ಜಿಮ್, ಕ್ಲಬ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಾರ್, ಸ್ವಿಮ್ಮಿಂಗ್ ಪೂಲ್, ಪಾರ್ಕ್, ಹಾಲ್ಗೆ ಅವಕಾಶ ಇಲ್ಲ.
  • ಅವಶ್ಯಕ ವಸ್ತುಗಳಲ್ಲದೆ ಇತರೆ ವಸ್ತುಗಳ ಮಾರಾಟದ ಅಂಗಡಿ, ಮಳಿಗೆಗಳನ್ನು ತೆರೆಯಲು ಅವಕಾಶ ಇಲ್ಲ.
  • ಸೆಲೂನ್, ಸ್ಪಾ, ಬಟ್ಟೆ ಅಂಗಡಿಗಳಿಗೂ ಅವಕಾಶ ಇಲ್ಲ
  • ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ, ಮನರಂಜನೆ, ಧಾರ್ಮಿಕದಂಥ ಚಟುವಟಿಕೆಗಳಿಗೆ ಸಾರ್ವಜನಿಕವಾಗಿ ಅವಕಾಶ ಇಲ್ಲ.
  • ಶಾಲೆ, ಕಾಲೇಜು, ಶೈಕ್ಷಣಿಕ ಸಂಸ್ಥೆ, ಕೋಚಿಂಗ್ ಸೆಂಟರ್, ಟ್ರೈನಿಂಗ್ ಸೆಂಟರ್ ಗೆ ಅವಕಾಶ ಇಲ್ಲ.
  • ಎರಡು ವಾರಗಳ ಅವಧಿಯಲ್ಲಿ ದ.ಕ. ಜಿಲ್ಲೆಯಾದ್ಯಂತ ಯಾವುದೇ ರೀತಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ರೈಲು, ವಿಮಾನ, ಸಾರ್ವಜನಿಕ ಬಸ್ ಸಂಚಾರ ಲಭ್ಯವಿರುವುದಿಲ್ಲ.
  • ಎಲ್ಲ ಶಿಕ್ಷಣ ಸಂಸ್ಥೆಗಳು, ಕೋಚಿಂಗ್ ಕ್ಲಾಸುಗಳು ತೆರೆದಿರುವುದಿಲ್ಲ.
  • ಜಿಲ್ಲೆಯಲ್ಲಿ ಸಲೂನ್, ಬ್ಯೂಟಿ ಪಾರ್ಲರ್, ಬಟ್ಟೆ ಅಂಗಡಿಗಳನ್ನು ತೆರೆಯಲು ಅವಕಾಶ ಇರುವುದಿಲ್ಲ.
  • ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಸಾರ್ವಜನಿಕರ ಓಡಾಟ ನಿರ್ಬಂಧಿಸಲಾಗಿದೆ.
  • 65 ವರ್ಷ ಮೇಲ್ಪಟ್ಟವರು, 10 ವರ್ಷಗಳ ಕೆಳಗಿನ ಮಕ್ಕಳು, ಆರೋಗ್ಯ ಸಮಸ್ಯೆಯಿಂದ ಬಳಲುವವರು, ಗರ್ಭಿಣಿಯರು, ತುರ್ತು ಪರಿಸ್ಥಿತಿ ಹೊರತುಪಡಿಸಿ ಮನೆಯಿಂದ ಹೊರಬರುವುದು ಬೇಡ.

ಬಂಟ್ವಾಳನ್ಯೂಸ್ ನಿರಂತರವಾಗಿ ಓದಲು ಈ ಗುಂಪಿಗೆ ಸೇರಬಹುದು

https://chat.whatsapp.com/LNdS3qwTHVYLnGnKXmfSCn

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ