ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಯಾವುದೇ ಹೊಸ ಪ್ರಕರಣಗಳು ಕೋವಿಡ್ ಗೆ ಸಂಬಂಧಿಸಿ ವರದಿಯಾಗಿಲ್ಲ. ಭಾನುವಾರ ಜಿಲ್ಲಾಧಿಕಾರಿ ಒದಗಿಸಿದ ಮಾಹಿತಿ ಪ್ರಕಾರ, ಎನ್.ಐ.ಟಿ.ಕೆ.ಯಲ್ಲಿ 68, ಇಎಸ್ ಐ ಆಸ್ಪತ್ರೆಯಲ್ಲಿ 40 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ. ಭಾನುವಾರರ 95 ಮಂದಿಯ ಸ್ಯಾಂಪಲ್ ಕಳುಹಿಸಲಾಗಿದೆ. 114 ಮಂದಿಯ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿದೆ. ಒಟ್ಟು 377 ಮಂದಿಯ ಪರೀಕ್ಷಾ ವರದಿ ಬರಲು ಬಾಕಿ ಇದೆ. 16 ಮಂದಿ ನಿಗಾದಲ್ಲಿದ್ದಾರೆ.
ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಮಂದಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. ಅವರಲ್ಲಿ 6 ಮಂದಿ ಹೊರಜಿಲ್ಲೆ, ರಾಜ್ಯದವರು. ಒಟ್ಟು 24 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯ ಪ್ರಕರಣಗಳು 18. ಇವರ ಪೈಕಿ 9 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 3 ಮಂದಿ ಸಾವನ್ನಪ್ಪಿದ್ದಾರೆ.