ಬಂಟ್ವಾಳ, ಬಿ.ಸಿ.ರೋಡ್, ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಮಳೆ ತಂಪೆರೆಯಿತು. ಸುಳ್ಯ, ಬೆಳ್ತಂಗಡಿ, ಮೂಲ್ಕಿಯಲ್ಲೂ ಮಳೆಯಾಗಿದೆ. ಮಂಗಳೂರು ಸಹಿತ ಜಿಲ್ಲೆಯ ಹಲವೆಡೆ ದಿನವಿಡೀ ಸೆಕೆ, ಬಿಸಿಲು ಮತ್ತು ಸಂಜೆ ವೇಳೆ ಮೋಡ ಕವಿದ ವಾತಾವರಣ ಇತ್ತು. ಕೆಲವೆಡೆ ಮಳೆಯಾದರೆ, ಇನ್ನು ಕೆಲವೆಡೆ ಗುಡುಗು ಸದ್ದು ಮಾತ್ರ ಇತ್ತು. ಸುಮಾರು ಒಂದೂವರೆ ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿಯೂ ಶನಿವಾರ ರಾತ್ರಿ ಅಡಚಣೆ ಉಂಟಾಯಿತು.