ಮೇ.2ರ ಶನಿವಾರ ಬೆಳಗ್ಗೆ 12 ಗಂಟೆಗೆ ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒದಗಿಸಿದ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 9 ಹೊಸ ಕೋವಿಡ್ ಕೇಸ್ ಪತ್ತೆಯಾಗಿದೆ.
ಇವರಲ್ಲಿ ತೀವ್ರ ಉಸಿರಾಟದ ಸೋಂಕಿನಿಂದ ಬೀದರ್ ಆಸ್ಪತ್ರೆಗೆ ದಾಖಲಾಗಿ ಮೃತರಾಗಿದ್ದ 82 ವರ್ಷದ ವೃದ್ಧರೊಬ್ಬರೂ ಸೇರಿದ್ದಾರೆ. ಉಳಿದಂತೆ ತುಮಕೂರು 2, ಚಿಕ್ಕಬಳ್ಳಾಪುರ 1, ವಿಜಯಪುರ -2, ಬಾಗಲಕೋಟೆ 1, ಬೆಂಗಳೂರು ನಗರದ 1 ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ತಿಳಿಸಿದೆ.