ದಾಖಲೆಗಳಿಲ್ಲದೆ ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದ ಅಟೋ ರಿಕ್ಷಾವನ್ನು ವಿಟ್ಲ ಉಪನಿರೀಕ್ಷಕ ವಿನೋದ್ ಕೆ. ಎಸ್. ಅವರ ತಂಡ 35 ಕೆಜಿ ಮಾಂಸ ಸಹಿತ ವಶಕ್ಕೆ ಪಡೆದಿದ್ದಾರೆ.
ಘಟನೆ ಕೊಳ್ನಾಡು ತಾಳಿತ್ತನೂಜಿಯಲ್ಲಿ ಶುಕ್ರವಾರ ನಡೆದಿದೆ. ಕೊಳ್ನಾಡು ಗ್ರಾಮದ ತಾಳಿತ್ತನೂಜಿ ಶಾಲಾ ಬಳಿ ವಿಟ್ಲ ಉಪನಿರೀಕ್ಷಕರು ಹಾಗೂ ಪೊಲೀಸರ ತಂಡ ಗಸ್ತಿನಲ್ಲಿದ್ದ ಸಮಯ ಮರಕ್ಕಡ ಬೈಲು ಕಡೆಯಿಂದ ಕೋಡಪದವು ಕಡೆಗೆ ಮಾಂಸ ಸಾಗಾಟ ಮಾಡುವುದು ಕಂಡು ಬಂದಿದ್ದು, ವಾಹನ ನಿಲ್ಲಿಸಲು ಸೂಚನೆ ನೀಡಿದ ಸಮಯ ಚಾಲಕ ರಿಕ್ಷಾ ಬಿಟ್ಟು ಪಲಾಯನ ಮಾಡಿದ್ದು, ಪರಿಶೀಲನೆ ನಡೆಸಿದ ಸಂದರ್ಭ ದನವನ್ನು ವಧೆ ಮಾಡಿ ದಾಖಲೆಗಳಿಲ್ಲದೆ ಮಾಂಸ ಮಾರಾಟಕ್ಕೆ ಹೊರಟಿದ್ದು, ಪತ್ತೆಯಾಗಿದೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…