ಬಂಟ್ವಾಳ: ತಾಲೂಕಿನ ಬಂಟ್ವಾಳ ಕಸ್ಬಾ ಗ್ರಾಮದ ಬಂಟ್ವಾಳ ಪೇಟೆಯನ್ನು ಕರೋನಾ ಕಂಟೈನ್ಮೆಂಟ್ ಪ್ರದೇಶವಾಗಿ ಸೀಲ್ ಡೌನ್ ಘೋಷಣೆ ಮಾಡಿದ್ದು, ಈ ಪ್ರದೇಶದಲ್ಲಿ ಕಾರ್ಯಾಚರಿಸುವ ನಾಲ್ಕು ನ್ಯಾಯಬೆಲೆ ಅಂಗಡಿಗಳ ಪಡಿತರದಾರರಿಗೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಲಕ್ಷ್ಮೀನಾರಾಯಣ ಕಿಣಿ ಮತ್ತು ಟಿಎಪಿಸಿಎಂಎಸ್ ಚಿಲ್ಲರೆ ಮಳಿಗೆ ಬಂಟ್ವಾಳವನ್ನು ಬ್ರಹ್ಮಶ್ರೀ ನಾರಾಯಣಗುರು ಮಂದಿರ ಗಾಣದಪಡ್ಪು ಬೈಪಾಸ್ ರಸ್ತೆಗೆ, ಸುಮಿತ್ರ ಕಿಣಿ ಮತ್ತು ರವೀಂದ್ರ ಪ್ರಭು ಇವರ ಪಡಿತರದಾರರಿಗೆ ಅಮ್ಟಾಡಿ ಗ್ರಾಮದ ಲೊರೆಟ್ಟೊ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಗೆ ಪರ್ಯಾಯ ಸ್ಥಳವಾಗಿ ಗುರುತಿಸಲಾಗಿದೆ. ನಾಲ್ಕು ನ್ಯಾಯಬೆಲೆ ಅಂಗಡಿಗಳು ಕ್ವಾರಂಟೈನ್ ಸೀಲ್ ಡೌನ್ ಪ್ರದೇಶಕ್ಕೆ ಬರುವ ಕಾರಣ ಈ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರ್ ಪ್ರಕಟಣೆ ತಿಳಿಸಿದೆ.