ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಕಲ್ಲೊಟ್ಟು ಮನೆ ನಿವಾಸಿ ರಿಚಾರ್ಡ್ ಫೆರ್ನಾಂಡೀಸ್ (50) ಎಂಬ ಮಾಜಿ ಸೈನಿಕ ಅವರ ಶವ ಕೊಳೆತ ಸ್ಥಿತಿಯಲ್ಲಿ ಅವರ ಮನೆಯಲ್ಲಿಯೇ ಬುಧವಾರ ಬೆಳಗ್ಗೆ ಪತ್ತೆಯಾಗಿದೆ.
ಅವಿವಾಹಿತರಾಗಿದ್ದ ಇವರ ಅವಿವಾಹಿತ ಸಹೋದರಿಯರಿಬ್ಬರೂ ಮಾನಸಿಕ ಅಸ್ವಸ್ಥರಾಗಿದ್ದು ಹೀಗಾಗಿ ಸಹೋದರ ಮೃತಪಟ್ಟಿರುವ ಕುರಿತು ಅವರಿಗೂ ಗೊತ್ತಾಗಲಿಲ್ಲ, ಸಮೀಪದ ಮನೆಯವರು ಅನುಮಾನಗೊಂಡು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಸಮೀಪದ ಡೈರಿಗೆ ಹಾಲು ತರಲು ಹೋದವರು ಮತ್ತೆ ಉಳಿದ ದಿನಗಳಲ್ಲಿ ಕಾಣದ ಕಾರಣ ಅನುಮಾನಗೊಂಡು ಸಮೀಪದ ಮನೆಯವರು ರಿಚಾರ್ಡ್ ಅವರ ಮನೆಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಎಸ್.ಐ. ಪ್ರಸನ್ನ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.. ಸುಮಾರು ನಾಲ್ಕು ದಿನಗಳ ಹಿಂದೆಯೇ ಇವರು ಮೃತರಾಗಿದ್ದಿರಬಹುದಾದ ಶಂಕೆ ಇದ್ದು, ಅಸಹಜ ಸಾವು ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೊರೆಟ್ಟೋ ಚರ್ಚ್ ಧರ್ಮಗುರುಗಳು ಮತ್ತು ಚರ್ಚ್ ಪಾಲನಾ ಮಂಡಳಿ ಸದಸ್ಯರು ಕ್ಯಾಥೊಲಿಕ್ ವಿಧಿ ವಿಧಾನ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…