ಭಾರತೀಯ ಜನತಾ ಪಾರ್ಟಿ ಇರ್ವತ್ತೂರು ಹಾಗೂ ಹಾಲೂ ಉತ್ಪಾದಕರ ಸಂಘ (ರಿ.) ಇರ್ವತ್ತೂರು ವತಿಯಿಂದ ಇರ್ವತ್ತೂರು ಗ್ರಾಮದ ನಾಗರೀಕರಿಗೆ ವಿಷ್ಣುಮೂರ್ತಿ ದೇವಸ್ಥಾನದ ಸತ್ಯನಾರಾಯಣ ಸಭಾಂಗಣದಲ್ಲಿ ಬ್ಯಾಂಕಿಂಗ್ ಸೇವೆಯನ್ನು ನೀಡಲಾಯಿತು.
ಬಡ ಜನರು ತಮ್ಮ ಖಾತೆಯಲ್ಲಿ ಹಾಕಿದ್ದ ಹಣ, ಇತರ ಯೋಜನೆಗಳಿಂದ ಜಮೆಯಾದ ಹಣವನ್ನು ತೆಗೆಯಲು ಬ್ಯಾಂಕ್ ಗೆ ಹೋಗಲು ವಾಹನದ ವ್ಯವಸ್ಥೆ ಇಲ್ಲದೇ ಹಾಗೂ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಇರುವ ಸಮಸ್ಯೆಯನ್ನು ಮನಗಂಡು ಸಿಂಡಿಕೇಟ್ ಬ್ಯಾಂಕ್ ಸಹಯೋಗದೊಂದಿಗೆ ಕೆನರಾ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ನ ಖಾತೆಗೆ ಜಮೆಯಾದ ಜನಧನ್, ಕಿಸಾನ್ ಸಮ್ಮಾನ್ ಉದ್ಯೋಗ ಖಾತರಿ, ಹಾಗೂ ಉಜ್ವಲ ಯೋಜನೆ,ಹಾಗೂ ಇನ್ನಿತರ ಯೋಜನಗಳ ಜಮೆಯಾದ ಹಣವನ್ನು ತೆಗೆದುಕೊಡಲಾಯಿತು.
ಸಿಂಡಿಕೇಟ್ ಬ್ಯಾಂಕ್ ನ ಸಿಬ್ಬಂದಿಗಳಾದ ಹರೀಶ್ ಬಡಕಜೆಕಾರ್, ಸುಮತಿ ಬಡಕಜೆಕಾರ್, ಗಿರೀಶ್ ವಗ್ಗ, ಪಿಲಾತ್ತಬೆಟ್ಟು ಸಹಕಾರಿ ಸಂಘ ಹಾಗೂ ಇರ್ವತ್ತೂರು ಹಾಲೂ ಉತ್ಪಾದಕ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ, ಇರ್ವತ್ತೂರು ಗ್ರಾ.ಪಂ ಸದಸ್ಯ ದಯಾನಂದ್ ಕುಲಾಲ್ ಕಲ್ಲಡ್ಕ, ಇರ್ವತ್ತೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಕುಮಾರ್ ಕುಂಟಜಾಲು, ಇರ್ವತ್ತೂರು ಹಾಲೂ ಉತ್ಪಾದಕ ಸಂಘದ ಕಾರ್ಯದರ್ಶಿ ಪದ್ಮನಾಭ ಕಲಾಬಾಗಿಲು, ಮೂಡುಪಡುಕೋಡಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ದಯಾನಂದ್ ಎಸ್, ಎರ್ಮೆನಾಡು, ಹಾಗೂ ಗಂಗಾಧರ್ ಶೆಟ್ಟಿ ಅರ್ಕೆದೊಟ್ಟು ಉಪಸ್ಥಿತರಿದ್ದರು.