ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂದೂ ರೂಪೇಶ್ ಹೊರಡಿಸಿರುವ ಪತ್ರಿಕಾ ಪ್ರಕಟಣೆಯ ಅನುಸಾರ ಕೊರೊನಾ ಸಂಬಂಧಿಸಿ ಜಿಲ್ಲೆಯಲ್ಲಿ ಒಟ್ಟು 21 ಪ್ರಕರಣಗಳು ದಾಖಲಾಗಿವೆ. ಇಂದು ಮಂಗಳೂರಿನಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.
ವಿವರ ಹೀಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎರಡು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು 21 ಪ್ರಕರಣಗಳು ಕೋವಿಡ್ ಪಾಸಿಟಿವ್ ಪ್ರಕರಣಗಳು ಇದುವರೆಗೆ ವರದಿಯಾದಂತಾಗಿದೆ. ಇವರ ಪೈಕಿ ಇಬ್ಬರು ಮೃತಪಟ್ಟಿದ್ದು, 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.
ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಬಂಟ್ವಾಳದ ಮೂವರು, ಉಪ್ಪಿನಂಗಡಿಯ ಇಬ್ಬರು ಮತ್ತು ಮಂಗಳೂರು ಶಕ್ತಿನಗರ ಪರಿಸರದ ಇಬ್ಬರು ಇದ್ದಾರೆ. ಬಂಟ್ವಾಳ ತಾಲೂಕಿನಲ್ಲಿ 3 ಚಿಕಿತ್ಸೆ ಪಡೆಯುತ್ತಿದ್ದರೆ 2 ಗುಣಮುಖರಾಗಿದ್ದರು. 2 ಸಾವನ್ನಪ್ಪಿದ್ದಾರೆ.
ಸೋಮವಾರ ಮಂಗಳೂರಿನ ಇಬ್ಬರಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ.
ಮಂಗಳೂರು ಮಹಾನಗರಪಾಲಿಕೆಯ ಕುಲಶೇಖರ ವ್ಯಾಪ್ತಿಯ ಶಕ್ತಿನಗರ ನಿವಾಸಿ 80ರ ಮಹಿಳೆ ಮತ್ತು ಅವರ ಮಗ 45ರ ಮಗ ಅವರಿಗೆ ಸೋಂಕು ದೃಢಪಟ್ಟಿದ್ದು, ಇವರೂ ರೋಗಿ ಸಂಖ್ಯೆ 432ರ ಸಂಪರ್ಕದಲ್ಲಿದ್ದರು.
ಇದೀಗ 8 ಕಂಟೈನ್ಮೆಂಟ್ ವಲಯಗಳನ್ನು ಮಾಡಲಾಗಿದೆ. ಅವು ಹೀಗಿವೆ. ಸಂಪ್ಯ – ಪುತ್ತೂರು. ತುಂಬೆ – ಬಂಟ್ವಾಳ, ತೊಕ್ಕೊಟ್ಟು-ಮಂಗಳೂರು, ಉಪ್ಪಿನಂಗಡಿ – ಪುತ್ತೂರು, ಬಿ.ಕಸ್ಬಾ ಬಂಟ್ವಾಳ –ಬಂಟ್ವಾಳ, ಫಸ್ಟ್ ನ್ಯೂರೊ ಆಸ್ಪತ್ರೆ – ಮಂಗಳೂರು, ನರಿಕೊಂಬು ಗ್ರಾಮದ ನಾಯಿಲ – ಬಂಟ್ವಾಳ, ಕಕ್ಕೆಬೆಟ್ಟು ಪದವು – ಮಂಗಳೂರು.
ವೆನ್ಲಾಕ್ ನಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯದ ಸ್ಥಿತಿ ಹೀಗಿದೆ.