ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ 47 ವರ್ಷದ ಮಹಿಳೆಯೊಬ್ಬರಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದ್ದು, ಒಟ್ಟಾರೆಯಾಗಿ ತಾಲೂಕಿನಲ್ಲಿ 7, ದಕ ಜಿಲ್ಲೆಯಲ್ಲಿ 12 ಮಂದಿ ಗುಣಮುಖರಾಗಿದ್ದು, 2 ಮಂದಿ ಸಾವನ್ನಪ್ಪಿದ್ದಾರೆ. ಉಪ್ಪಿನಂಗಡಿಯ 2, ಬಂಟ್ವಾಳ ಪೇಟೆಯ 2, ಪಾಣೆಮಂಗಳೂರು ಸಮೀಪದ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಮಹಿಳೆಯ ಕುಟುಂಬದ ಸದಸ್ಯರನ್ನೂ ಕ್ವಾರಂಟೈನ್ ಮಾಡಲಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳನ್ನೂ ನಿರ್ಬಂಧಗೊಳಿಸುವ ಸಾಧ್ಯತೆ ಇದೆ.
ಎ.23ರಂದು ಮೃತಪಟ್ಟಿದ್ದ ಕೇಸ್ ನಂಬರ್ P-432 ವೃದ್ದೆಯ ಸಂಪರ್ಕದಿಂದ ಸೋಂಕು ತಗಲಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಇಂದು ಪತ್ತೆಯಾದ ಏಕೈಕ ಕೊರೋನಾ ಪಾಸಿಟಿವ್ ಕೇಸ್ ಆದರೆ ಜಿಲ್ಲೆಯಲ್ಲಿ ಇದು 19ನೇ ಪ್ರಕರಣವಾಗಿದೆ.