ಬಂಟ್ವಾಳ

ಸರ್ಕಾರಿ ಕಚೇರಿಗಳಿಗೆ ಸ್ಯಾನಿಟೈಸರ್ ಬಳಕೆ ಉಪಕರಣ ಹಸ್ತಾಂತರ

ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಸಂಸ್ಥೆಯ ಟ್ರಸ್ಟಿ ಅರ್ಜುನ್ ಪೂಂಜಾ ವಿನ್ಯಾಸಗೊಳಿಸಿದ ಸ್ಯಾನಿಟೈಸರ್ ಉಪಕರಣವನ್ನು  (ನಿರ್ಮಲೀಕಾರಕ ಉಪಕರಣ) ತಾಲೂಕಿನ ಸರಕಾರಿ ಕಚೇರಿಗಳಿಗೆ ಶುಕ್ರವಾರ ಹಸ್ತಾಂತರಿಸಲಾಯಿತು.  ಬಂಟ್ವಾಳ ಮಿನಿ ವಿಧಾನಸೌಧ, ಪುರಸಭೆ ಕಚೇರಿ, ತಾಲೂಕು ಸರಕಾರಿ ಆಸ್ಪತ್ರೆ, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಕಚೇರಿ, ಬಂಟ್ವಾಳ ನಗರ ಪೊಲೀಸ್ ಠಾಣೆ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಸ್ಯಾನಿಟೈಸರ್ ಉಪಕರಣವನ್ನು ಉಚಿತವಾಗಿ ನೀಡಲಾಯಿತು. ಜನರು ಕೈಯಿಂದ ಯಂತ್ರವನ್ನು ಮುಟ್ಟದೆಯೇ ಸ್ಯಾನಿಟೈಸರ್ ಪಡೆಯಬಹುದಾಗಿದ್ದು ಇಲಾಖೆಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು.

ಜಾಹೀರಾತು

ಕಳೆದ ಹತ್ತು ದಿನಗಳ ಹಿಂದೆಯೇ ಅರ್ಜುನ್ ಪೂಂಜಾ ಅವರು ಕೈಯಿಂದ ಮುಟ್ಟದೆಯೇ ಸರಳವಾಗಿ ಸ್ಯಾನಿಟೈಸರ್ ಪಡೆಯುವ ಯಂತ್ರವನ್ನು ಆವಿಷ್ಕರಿಸಿದ್ದು ಮೊದಲ ಯಂತ್ರವನ್ನು ಫರಂಗಿಪೇಟೆಯ ಬಸ್ಸು ನಿಲ್ದಾಣದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಉಚಿತವಾಗಿ ಅಳವಡಿಸಲಾಗಿತ್ತು.  ಆ ಬಳಿಕ ಇತರ ಸರಕಾರಿ ಕಚೇರಿಗಳಿಗೂ ಈ ಯಂತ್ರವನ್ನು ಅಳವಡಿಸಲಾಗಿತ್ತು.  ಇದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿ ರಾಜ್ಯದ್ಯಂತ ಯಂತ್ರಕ್ಕೆ ಸಾಕಷ್ಟು ಬೇಡಿಕೆಗಳು ವ್ಯಕ್ತವಾಗಿದೆ. ಇದೀಗ ಬಂಟ್ವಾಳದ ಪ್ರಮುಖ ೬ ಸರಕಾರಿ ಕಚೇರಿಗಳಿಗೆ ಉಚಿತವಾಗಿ ನೀಡಲಾಯಿತು. ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ರಶ್ಮಿ ಎಸ್.ಆರ್., ಪುರಸಭೆಯಲ್ಲಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎಸೈ ಅವಿನಾಶ್, ಗ್ರಾಮಾಂತರ ಠಾಣೆಯಲ್ಲಿ ಎಸೈ ಪ್ರಸನ್ನ, ಡಿವೈಎಸ್ಪಿ ಕಚೇರಿಯಲ್ಲಿ ಎಎಸೈ ಸಂಜೀವ ಹಾಗೂ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಸ್ವೀಕರಿಸಿದರು. ಪ್ರೊಬೇಷನರಿ ಎಎಸ್ಪಿ ರಂಜಿತ್ ಅವರು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಇಂತಹ ಸ್ಯಾನಿಟೈಸರ್ ಯಂತ್ರ ಅಳವಡಿಸಿದರೆ ಉತ್ತಮ ಎನ್ನುವ ಅನಿಸಿಕೆ ವ್ಯಕ್ತಪಡಿಸಿದರು.

ಈ ಸಂದರ್ಭ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಟ್ರಸ್ಟಿಗಳಾದ ರೊ. ಪ್ರಕಾಶ್ ಕಾರಂತ್, ಅರ್ಜುನ್ ಪೂಂಜಾ, ಸದಸ್ಯರಾದ ಸುಕೇಶ್ ಶೆಟ್ಟಿ ತೇವು, ವಿಕ್ರಮ್ ಬರ್ಕೆ, ದಿನೇಶ್ ತುಂಬೆ ಹಾಜರಿದ್ದರು.

www.bantwalnews.com Editor: Harish Mambady

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

10 hours ago