ಗುರುವಾರ ಕೊರೊನೊ ಸೋಂಕಿನಿಂದ ಮೃತರಾದ ಮಹಿಳೆ ಅಂತ್ಯಸಂಸ್ಕಾರಕ್ಕೆ ಮಂಗಳೂರಿನಲ್ಲಿ ಸ್ಥಳೀಯರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಕೈಕುಂಜೆ ಎಂಬಲ್ಲಿರುವ ಹಿಂದು ರುದ್ರಭೂಮಿಯಲ್ಲಿ ಪೊಲೀಸ್ ಬಂದೋಬಸ್ತ್ ನಲ್ಲಿ ಜಿಲ್ಲಾಡಳಿತ ನಿರ್ದೇಶನದಲ್ಲಿ ತಾಲೂಕಾಡಳಿತ ನಡೆಸಿತು.
ಬಂಟ್ವಾಳ ಪೇಟೆಯ ಮಹಿಳೆ ಮೃತರಾಗಿದ್ದು, ಬಿ.ಸಿ.ರೋಡಿನ ರೈಲ್ವೆ ನಿಲ್ದಾಣ ಬಳಿ ಇರುವ ಗೂಡಿನಬಳಿ ಮತ್ತು ಕೈಕುಂಜೆ ಮಧ್ಯೆ ಇರುವ ಹಿಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರವನ್ನು ನಡೆಸಲಾಯಿತು. ಮಂಗಳೂರಿನಲ್ಲಿ ನಡೆದ ವಿರೋಧದ ವಿಚಾರಗಳನ್ನು ತಿಳಿದ ಸ್ಥಳೀಯರು ಆತಂಕದಿಂದ ಮಹಿಳೆಯರು, ಮಕ್ಕಳ ಸಹಿತ ಸ್ಥಳದಲ್ಲಿ ಜಮಾಯಿಸಿದಾಗ ಪೊಲೀಸರು ಬರಬೇಕಾಯಿತು. ಕೈಕುಂಜೆ ಪೂರ್ವ ಬಡಾವಣೆಯ ಪಕ್ಕದಲ್ಲೇ ಸ್ಮಶಾನವಿದ್ದು, ಇಲ್ಲಿ ದಹನಕ್ರಿಯೆ ನಡೆಯಿತು.