ಕೊರೊನಾ ಹಿನ್ನೆಲೆಯಲ್ಲಿ ನಮ್ಮ ಅಭಿಪ್ರಾಯಗಳೇನು, ಸರ್ಕಾರ ಕೈಗೊಂಡ ಕ್ರಮಗಳಿಗೆ ಪೂರಕವಾಗಿ ಏನು ಮಾಡಬಹುದು ಎಂಬ ಕುರಿತು ಓದುಗರ ಅಭಿಪ್ರಾಯಕ್ಕೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಅವುಗಳಲ್ಲಿ ಜಯಕೃಷ್ಣ ಭಟ್ ಈ ಮೈಲ್ ಮೂಲಕ ಕಳುಹಿಸಿದ ಅವರ ಅಭಿಪ್ರಾಯ ಇದು. ನೀವೂ ಬರೆಯಿರಿ. ಬರೆದದ್ದನ್ನು ವಾಟ್ಸಾಪ್ ಗೆ ಕಳುಹಿಸುವುದು ಬೇಡ. ವಿಳಾಸ: bantwalnews@gmail.com ಉತ್ತಮವಾದದ್ದನ್ನು ಪ್ರಕಟಿಸಲಾಗುವುದು. – ಹರೀಶ ಮಾಂಬಾಡಿ, ಸಂಪಾದಕ
ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪುಗುಂಪಾಗಿ ಸೇರುವವರು ಇನ್ನೂ ಇದ್ದಾರೆ ಅಂದರೆ ಕೊರೊನಾ ಕುರಿತು ಜಾಗೃತಿ ಜನರಿಗೆ ಇನ್ನೂ ಮೂಡಿಲ್ಲ ಎಂದು ಕಾಣಿಸುತ್ತದೆ. ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಧ್ವನಿವರ್ಧಕ ಮೂಲಕ ಎಚ್ಚರಿಕೆಯನ್ನು ಮೊಳಗಿಸುವ ಕಾರ್ಯ ಮಾಡುತ್ತಲೇ ಇರಬೇಕು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…