ಬಂಟ್ವಾಳದ ಮತ್ತೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರು ಕೋವಿಡ್ ನಿಂದ ಮೃತರಾದ ಮಹಿಳೆಯ ಹತ್ತಿರದ ಸಂಬಂಧಿ. ಕಳೆದ ಮಾರ್ಚ್ 18ರಂದು ಪಾರ್ಶ್ವವಾಯುವಿಗೆ ಸಂಬಂಧಿಸಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಬಳಿಕ ಏ.22ರಂದು ಮಂಗಳೂರಿನ ವೆನ್ಲಾಕ್ ನ ಐ.ಸಿ.ಯು.ಗೆ ದಾಖಲಾದರು. ಇದೀಗ ಇವರ ಗಂಟಲು ದ್ರವ ಪರೀಕ್ಷೆ ಸ್ವೀಕೃತವಾಗಿದ್ದು, ಇವರಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ದ.ಕ.ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ಪೇಟೆಯಲ್ಲಿ ಇದು ಮೂರನೇ ಪ್ರಕರಣ. ಇಡೀ ಬಂಟ್ವಾಳ ತಾಲೂಕಿನಲ್ಲಿ ಇದು 5ನೇ ಪ್ರಕರಣ. ಇವರಲ್ಲಿ ಇಬ್ಬರು ಗುಣಮುಖರಾಗಿದ್ದರೆ, ಒಬ್ಬರು ಮೃತಪಟ್ಟಿದ್ದಾರೆ. ಈಗ ಇಬ್ಬರು ಅಂದರೆ ಮೃತ ಮಹಿಳೆಯ ಸಂಬಂಧಿ ಮತ್ತು ಮೃತ ಮಹಿಳೆಯ ನೆರೆಮನೆಯವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…