ನಿಮ್ಮ ಧ್ವನಿ

ಲಾಕ್ ಡೌನ್ ನಲ್ಲಿ ನಾವು ಹೇಗಿರಬೇಕು, ಸರ್ಕಾರ ಏನು ಮಾಡಬೇಕು – ಇದು ನಿಮ್ಮ ಅಭಿಪ್ರಾಯ

ಕೊರೊನಾ ತಡೆಗಟ್ಟಲು ಸರಕಾರ ಈಗ ಕೈಗೊಂಡಿರುವ ಕ್ರಮಗಳು ಗೊತ್ತೇ ಇದೆ. ಈ ಕುರಿತು www.bantwalnews.com ಗೆ ನಾಲ್ವರು ಓದುಗರು ಈ ಮೈಲ್ ಮೂಲಕ ಅನಿಸಿಕೆ ವ್ಯಕ್ತಪಡಿಸಿದ್ದನ್ನು ಇಲ್ಲಿ ಪ್ರಕಟಿಸಲಾಗಿದೆ. bantwalnews@gmail.com ಈ ಈಮೈಲ್ ವಿಳಾಸಕ್ಕೆ ಬರೆದು ಕಳುಹಿಸಿ. ಉತ್ತಮವಾದದ್ದನ್ನು ಪ್ರಕಟಿಸಲಾಗುವುದು. ಇಲ್ಲಿದೆ ನಿಮ್ಮ ಧ್ವನಿ. STAY HOME, STAY SAFE. ಕೊರೊನಾ ವಿರುದ್ಧ ನಾವು ಜಯಿಸೋಣ – ಹರೀಶ ಮಾಂಬಾಡಿ, ಸಂಪಾದಕ.

ಜಾಹೀರಾತು

1) ಕಟ್ಟುನಿಟ್ಟಾಗಿ ಪಾಲಿಸಲು ಪ್ರಜೆಗಳು ಬದ್ಧರಾಗಿರಬೇಕು

ಈ ಮೈಲ್ ಮೂಲಕ ಕಳುಹಿಸಿದವರು: ಎಸ್.ಎಲ್. ಮಹಮ್ಮದ್.

ಸರಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸಿದರೆ ಸಾಲದು. ಅದನ್ನು ಕ್ರಮಬದ್ಧವಾಗಿ ಪಾಲಿಸುವಲ್ಲಿ ಪ್ರಜೆಗಳು ಬದ್ಧರಾಗಿರಬೇಕು. ಇದು ಕೇವಲ ಸರಕಾರದ ಭದ್ರತೆಯಲ್ಲ. ಸಮಸ್ತ ಭಾರತೀಯರ ಸಂರಕ್ಷಣೆಗಾಗಿ  ಸರ್ಕಾರ ಕೈಗೊಂಡ ಕ್ರಮಗಳು. ಭಾರತೀಯರೆಂದರೆ ಎಲ್ಲರೂ ಬುದ್ಧಿವಂತರು ಎಂದು ಹೇಳುವಂತಿಲ್ಲ. ನಿಯಮ ಉಲ್ಲಂಘನೆ ಮಾಡುವವರಿಗೆ ಹಿತಬೋಧನೆಗಳನ್ನು ನೀಡಬೇಕು.

 2. ಯುಪಿ, ಕೇರಳದ ರೀತಿ ಅನುಷ್ಠಾನವಾಗಲಿ

ಈ ಮೈಲ್ ಮೂಲಕ ಕಳುಹಿಸಿದವರು: ಮದನ್ ಮೋಹನ್ ಶೆಟ್ಟಿ

ನನ್ನ ಪ್ರಕಾರ, ಸರಕಾರ ಉತ್ತಮ ಕಾರ್ಯ ಮಾಡುತ್ತಿದೆ. ಆದರೆ ಉತ್ತರ ಪ್ರದೇಶ, ಕೇರಳದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಮಾಡಿದರೆ, ಮತ್ತಷ್ಟು ಉತ್ತಮವಾಗಬಹುದು.

3) ಬೇಕಾಬಿಟ್ಟಿ ಓಡಾಡುವುದು, ನಮ್ಮ ಸಾವಿಗೆ ನಾವೇ ಕಾರಣವಾಗುವುದೂ ಒಂದೇ

  • ಈ ಮೈಲ್ ಮೂಲಕ ಕಳುಹಿಸಿದವರು: ಸಂದೇಶ್ ಗೌಡ ಮಧ್ವ

ಲಾಕ್ ಡೌನ್ ಘೋಷಿಸಿಸುವ ಮುಖಂತರ ದೇಶದ ಆರ್ಥಿಕತೆಗಿಂತ ಜನರ ಪ್ರಾಣವೇ ಮುಖ್ಯ ಎಂದು ಜಗತ್ತಗೆ ತೋರಿಸಿ ಕೊಟ್ಟಿದೆ. ಆದರೆ ಇದನ್ನರಿಯಾದ ಜನರು ನನ್ನೂರಿನಲ್ಲಿ ಯಾವುದೇ ವೈರಸ್‌ ಇಲ್ಲ ಎಂದು ಬೇಕಾಬಿಟ್ಟಿ ಓಡಾಡುತ್ತಿರುವುದು ನಮ್ಮ ಸಾವಿಗೆ ನಾವೇ ಕಾರಣವಾಗುತ್ತಿರುವುದು ಒಂದೇ. ಈ ಭಯನಕ ವೈರಾಸ್ ಇಷ್ಟೆಲ್ಲ ತೊಂದರೆ ಮಾಡುತ್ತಿದ್ದರು ಇನ್ನು ಅರಿಯಾದ ಜನರಿಗೆ ದಂಡಂ ದಶಗುಣಂ ಎಂಬುದೇ ಸರಿ ಅಂದರೇ  ಇಂತವರ ಮೇಲೆ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಪಾಸ್ ಇಲ್ಲದೇ ರಸ್ತೆಯಲ್ಲಿ ತಿರುಗುತ್ತಿರುವ ವಾಹನ‌ಗಳ ಲೈಸೆನ್ಸ್ ನಿಷೇದಿಸಬೇಕು ಮತ್ತು ಅಂತಹ ವ್ಯಕ್ತಿಗಳನ್ನು ಕಾರಾಗೃಹದಲ್ಲಿ ತಲಾ 15,000 ರೂ ದಂಡ ವಿದಿಸಬೇಕು. ಅದಲ್ಲದೇ ಪ್ರತಿದಿನ ಅಂಗಡಿ ಮುಂಗಟ್ಟುಗಳನ್ನು ತೆರೆಯುವ ಬದಲು ಅಂಗಡಿ ಮಾಲಿಕ ಮತ್ತು ಊರಿನಲ್ಲಿ ಪಾಸ್ ಹೊಂದಿದ ವ್ಯಕ್ತಿಗಳಿಗೆ ತಿಳಿಸಿ ವಾರಕ್ಕೆ  ಆಗುವ ರಷ್ಟು ಸಾಮಾಗ್ರಿಗಳನ್ನು ಒಮ್ಮೆಲೇ ಖರೀದಿಸಬೇಕು ..ಪ್ರತಿನಿತ್ಯ ಖರೀದಿಯನ್ನು ನಿಲ್ಲಿಸ ಬೇಕು.ಅಥವಾ ಸರ್ಕಾರವೇ ಪ್ರತಿಜಿಲ್ಲೆಯಲು ಪ್ರತಿದಿನದ ಸಾಮಗ್ರಿ ಮನೆಗೆ ನೇರಾವಾಗಿ ತಲುಪುವಂತಹ ಕ್ರಮ ಕೈಗೊಳ್ಳುವುದು ಉತ್ತಮ. ಕೊನೆಯಾದಾಗಿ,  ದೇಶದಿಂದ ಕೊರೋನ ವೈರಸ್ನೊಂದಿಗೆ ಹೋರಾಡುವವರ ಜತೆಗಿರೋಣ ಅವರ ಪರಿಶ್ರಮ ಕ್ಕೆ ಯಶಸ್ಸು ಸಿಗಲೆಂದು ನಮ್ಮನಮ್ಮ ದೇವರುಗಳಲ್ಲಿ ಬೇಡೋಣ ನಮ್ಮಗೆ ನಾವೇ ಬಂಧನ‌ ಹಾಕಿಕೊಂಡು ಮನೆಯಲ್ಲಿಯೇ ಇದ್ದು ಯುದ್ದ ಸಾರೋಣ ಕೊರೋಣ ಸಂಕೋಲೆಯನ್ನು ಮುರಿದು ಅದರ ವಿರುದ್ಧ ವಿಜಯಪತಾಕೆ ಹಾರಿಸೋಣ  ಕೊರೋನ ವಿರುದ್ಧ ಯುದ್ಧ ಸಾರಿ ಗೆದ್ದ ಇಡೀ ಪ್ರಪಂಚಕ್ಕೆ ಮಾದರಿಯಾಗೋಣ.

4) ದಿನಕ್ಕೊಂದು ನಿರ್ಧಾರ ಸರಿಯಲ್ಲ

ಈ ಮೈಲ್ ಮೂಲಕ ಕಳುಹಿಸಿದವರು: ಗಣಪತಿ ಭಟ್

ದಿನಕೊಂದು ಬಾರಿ ನಿರ್ದೇಶನ ಬದಲಾವಣೆ ಸರಿಯಲ್ಲ. ಇಂತಹ ಸಂದರ್ಭದಲ್ಲಿ ದಿಟ್ಟ ನಿರ್ದಾರ ಮಾಡಬೇಕು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.