ಬಂಟ್ವಾಳ

ಬಂಟ್ವಾಳದಲ್ಲಿ ಸಂಪೂರ್ಣ ನಿರ್ಬಂಧ, ಹೆದ್ದಾರಿಯಲ್ಲಷ್ಟೇ ತುರ್ತು ವಾಹನ ಸಂಚಾರ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮಹಿಳೆಯೊಬ್ಬರು ಕೋವಿಡ್ ಗೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಡೀ ಬಂಟ್ವಾಳ ಪೇಟೆಯನ್ನು ಬಂದ್ ಮಾಡಲಾಗಿದೆ. ಪೇಟೆಯ ಮಧ್ಯೆ  ಯಾರೂ ಮನೆಯಿಂದ ಹೊರಬರುತ್ತಿಲ್ಲ. ಭಾನುವಾರ ರಾತ್ರಿ ಪೇಟೆಯ ಪ್ರಮುಖ ರಸ್ತೆಯನ್ನು ಬ್ಯಾರಿಕೇಡ್ ಮತ್ತು ತಾತ್ಕಾಲಿಕವಾಗಿ ಮಣ್ಣಿನ ಗೋಡೆ ಕಟ್ಟುವ ಮೂಲಕ ಬಂದ್ ಮಾಡಲಾಯಿತು. ಬಂಟ್ವಾಳ ಜಿಲ್ಲಾಡಳಿತ ಸೂಚನೆಯಲ್ಲಿ ಪುರಸಭೆ, ಆರೋಗ್ಯ ಇಲಾಖೆ, ಪೊಲೀಸ್, ತಾಲೂಕಾಡಳಿತ ಸಹಿತ ನಾನಾ ಸರ್ಕಾರಿ ಇಲಾಖೆಯ ಅಧಿಕಾರಿ ಸಿಬ್ಬಂದಿ ನಿಗಾ ಇರಿಸಿದ್ದು, ಸಾರ್ವಜನಿಕರಿಗೆ ಅವಶ್ಯವಿರುವ ವಸ್ತುಗಳನ್ನು ಮನೆಮನೆಗೆ ಒದಗಿಸುವ ವ್ಯವಸ್ಥೆ ಮಾಡಲಿದೆ. ಹೆದ್ದಾರಿಯಲ್ಲಷ್ಟೇ ಅಗತ್ಯವಿರುವ ಅತಿ ಅವಶ್ಯವಿರುವ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಜಾಹೀರಾತು

ಮೃತ ಮಹಿಳೆಯ ಮನೆ ಸುತ್ತಮುತ್ತಲಿನ ವ್ಯಾಪ್ತಿಯನ್ನು ಕಂಟೈನ್ಮೆಂಟ್ ಏರಿಯಾ , ಸೋಂಕಿನ ಮನೆಯಿಂದ ಸುಮಾರು ೩ ಕಿ. ಮೀ ಸುತ್ತಲೂ ಇಂಟೆನ್ಸಿವ್ ಬಫರ್ ಝೋನ್ ಬಿ.ಸಿ.ರೋಡ್ ಸೇರಿದಂತೆ ಸುಮಾರು ಐದಾರು ಕಿ.ಮೀ. ವ್ಯಾಪ್ತಿಯ ಭಾಗ ಬಫರ್ ಝೋನ್ ಎಂದು ಗುರುತಿಸಲಾಗಿದೆ. ಸೋಂಕಿತ ಮಹಿಳೆ ಇದ್ದ ಮನೆಯ ಸುತ್ತಮುತ್ತಲಿನ ಮನೆಗಳವರ ಆರೋಗ್ಯ ತಪಾಸಣೆ ಸಹಿತ ಹಲವು ಕ್ರಮಗಳನ್ನು ಜಿಲ್ಲಾಡಳಿತವು ತಾಲೂಕಾಡಳಿತ ಪುರಸಭೆ ಮತ್ತು ಆರೋಗ್ಯ ಇಲಾಖೆ ಸಹಕಾರದಲ್ಲಿ ಕೈಗೊಳ್ಳಲಿದೆ.

www.bantwalnews.com Editor: Harish Mambady

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

36 minutes ago