ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂಟ್ವಾಳ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಕಂಡ ಮಾಜಿ ಸಚಿವ ರಮಾನಾಥ ರೈ ತಾಲೂಕು ಆಡಳಿತ ಸಂಪರ್ಕಿಸಿ ಆತನನ್ನು ನಿರಾಶ್ರಿತರ ಶಿಬಿರಕ್ಕೆ ಸೇರಿಸಿದರು.
ಊರು ಕೇಳಿದರೆ ಬಿಹಾರ ಎನ್ನುವ ವ್ಯಕ್ತಿಯೊಬ್ಬ ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಅಡ್ಡಾಡುತ್ತಿರುವುದನ್ನು ಗಮನಿಸಿದ ಮಾಜಿ ಸಚಿವ ಬಿ.ರಮಾನಾಥ ರೈ, ಕೂಡಲೇ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್.ಅವರನ್ನು ಸಂಪರ್ಕಿಸಿದ್ದು, ಮಂಗಳೂರಿನ ನಿರಾಶ್ರಿತರ ಶಿಬಿರಕ್ಕೆ ಸೇರಿಸಲು ನೆರವಾದರು. ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಅವರನ್ನು ಸ್ಥಳಕ್ಕೆ ಕಳುಹಿಸಿದ ತಹಸೀಲ್ದಾರ್, ಆತನ ಬಗ್ಗೆ ಮಾಹಿತಿ ಪಡೆದುಕೊಂಡರು. ಸ್ವಲ್ಪಮಟ್ಟಿಗೆ ಮಾನಸಿಕ ಅಸ್ವಸ್ಥತನಂತೆ ಕಂಡು ಬಂದಿರುವುರಿಂದ ಈತನನ್ನು ಮಂಗಳೂರಿನ ವಾಮಂಜೂರು ನಿರಾಶ್ರಿತರ ಶಿಬಿರಕ್ಕೆ ಕೈಕಂಬದ ಸಮಾಜಸೇವಕ ಸಮದ್ ಕಾರಿನಲ್ಲಿ ಕರೆದುಕೊಂಡು ಬಿಡಲಾಯಿತು.