ಬಂಟ್ವಾಳದ 50 ವರ್ಷದ ಮಹಿಳೆಯೊಬ್ಬರು ಕೊರೊನಾ ವೈರಸ್ ಸೋಂಕಿನಿಂದ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮಂಗಳೂರಿನ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಬಂಟ್ವಾಳ ಪೇಟೆ ನಿವಾಸಿಯಾಗಿರುವ ಅವರಿಗೆ ಕೊರೊನಾ ಇರುವುದು ಮಧ್ಯಾಹ್ನ ದೃಢಪಟ್ಟಿತು. ಒಡನೆಯೇ ಬಂಟ್ವಾಳದಾದ್ಯಂತ ಸಾರ್ವಜನಿಕ ಸಂಚಾರ ನಿರ್ಬಂಧ ಮಾಡಲಾಯಿತು.
ಇಡೀ ಬಂಟ್ವಾಳ ಪೇಟೆಯುದ್ದಕ್ಕೂ ತೆರಳಿದ ಪೊಲೀಸರು ಧ್ವನಿವರ್ಧಕ ಮೂಲಕ ನಿರ್ಬಂಧ ಘೋಷಿಸಿದರು. ಬಂಟ್ವಾಳ ಕಸಬಾ, ಜಕ್ರಿಬೆಟ್ಟು, ಬಡ್ಡಕಟ್ಟೆ ಸಹಿತ ಪಟ್ಟಣಕ್ಕೆ ಪ್ರವೇಶಿಸುವ ಮತ್ತು ಹೊರ ಹೋಗುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಸಾವನ್ನಪ್ಪಿರುವ ಮಹಿಳೆ ಮನೆ ಬಂಟ್ವಾಳ ಪೇಟೆಯ ಮಧ್ಯೆ ಇದ್ದು, ಅದರ ಸುತ್ತಮುತ್ತ ಸುಮಾರು 300ಕ್ಕೂ ಅಧಿಕ ಮನೆಗಳು, ಅಂಗಡಿ, ಮುಂಗಟ್ಟುಗಳಿವೆ. ಈ ಎಲ್ಲಾ ಪ್ರದೇಶಗಳಿಗೂ ಪೊಲೀಸರು ತೆರಳಿ ಮನೆಯಿಂದ ಯಾರೂ ಹೊರ ಬರದಂತೆ ಸೂಚಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…