ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರ ಮಂಗಳೂರು ಇವರು ನೀಡಿರುವ ಅಂದಾಜು ರೂ.35,000 ಮೌಲ್ಯದ ಕೋವಿದ್ 19 ಗಂಟಲು ದ್ರವದ ಮಾದರಿ ಸಂಗ್ರಹಣ ಕೇಂದ್ರವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಆಸ್ಪತ್ರೆಗೆ ಹಸ್ತಾಂತರಿಸಿದರು. ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪುಷ್ಪಲತಾ, ನಿರ್ಮಿತಿ ಕೇಂದ್ರ ಆಡಳಿತ ನಿರ್ದೇಶಕ ರಾಜೇಂದ್ರ ಕಲ್ಬಾವಿ ಉಪಸ್ಥಿತರಿದ್ದರು