ಲಾಕ್ಡೌನ್ ಸಮಸ್ಯೆಗೊಳಗಾದ 21 ಕುಟುಂಬಗಳಿಗೆ ಸ್ವತಃ ತಮ್ಮ ಹಣದಲ್ಲಿಯೇ ಮಂಗಳೂರಿನ ಪೊಲೀಸ್ ಸಿಬ್ಬಂದಿಯೊಬ್ಬರು ಆಹಾರ ಕಿಟ್ ಮನೆಮನೆಗೆ ತೆರಳಿ ತಲುಪಿಸುವ ಕಾರ್ಯ ಮಾಡುತ್ತಿದ್ದು ಶ್ಲಾಘನೆಗೆ ಪಾತ್ರರಾಗಿದ್ದಾರೆ. ಅವರಿಗೆ ಮಂಗಳೂರು ಸಿಟಿ ಪೊಲೀಸರು ದಿನದ ಕೋವಿಡ್ ಸೇನಾನಿ ಎಂಬ ಬಿರುದು ನೀಡಿದ್ದಾರೆ.
ಸೋಮನ ಗೌಡ ಚೌಧರಿ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಕಳೆದ 43 ತಿಂಗಳುಗಳಿಂದ ತನ್ನದೇ ಅದ ವಿಶೇಷ ಸೇವಾ ಯೋಜನೆಯ ಮೂಲಕ ಸಮಾಜದ ಅಶಕ್ತರಿಗೆ ನೆರವಾಗುತ್ತ ಬಂದಿದ್ದು ಸುಮಾರು 30 ಲಕ್ಷ ಅಧಿಕ ನೆರವನ್ನು ನೀಡಿದೆ. ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) 180 ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ಸಾಮಾಗ್ರಿಗಳನ್ನು ಯಾವುದೇ ಪ್ರಚಾರವಿಲ್ಲದೆ ಕಳೆದ 5 ಹಂತದಲ್ಲಿ ವಿತರಣೆ ಮಾಡುತ್ತ ಬಂದಿತ್ತು. ಇಂಥ ಸಂದರ್ಭ, ಮಂಗಳೂರು ಸಿ.ಎ ಆರ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಜಯಪುರ ಮೂಲದ ಸೋಮನ ಗೌಡ ಚೌಧರಿಯವರು. ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ನ ಅಕ್ಕಿ ಮತ್ತು ದಿನಸಿ ಸಾಮಾಗ್ರಿ ವಿತರಣೆ ಕಾರ್ಯವನ್ನು ಮೆಚ್ಚಿ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ ) ಸಂಸ್ಥೆಯ ಮೂಲಕ 21 ಬಡ ಕುಟುಂಬಗಳಿಗೆ ತಮ್ಮ ಸ್ವಂತ ಹಣದಲ್ಲಿ ಅಕ್ಕಿ ಮತ್ತು ಅಗತ್ಯ ದಿನಸಿ ಸಾಮಾಗ್ರಿಗಳನ್ನು ಸ್ವತಃ ಅವರೇ ಮನೆ ಮನೆ ತೆರಳಿ ವಿತರಣೆ ಮಾಡುವುದರ ಮೂಲಕ ಸಮಾಜಕ್ಕೆ ಪ್ರೇರಣೆಯಾದರು. ಈ ಸಮಯದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಪ್ರಶಾಂತ್ ಪೂಜಾರಿ ಮತ್ತು ಮಹಾಂತೇಶ್ ಹಾಗೂ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.