ಕಾಲೇಜುಗಳಿಂದ ಪದವಿ ಪಡೆಯುವಾಗ ದೊರಕುವ ರೋಮಾಂಚನ, ಉತ್ಸಾಹವೆಲ್ಲವೂ ಉದ್ಯೋಗದ ಹುಡುಕಾಟ ನಡೆಸುವಾಗ ಇಳಿದುಹೋಗುತ್ತದೆ ಎಂಬ ಮಾತು ಪ್ರಚಲಿತ. ಕಲಿಯುವಾಗಲೇ ಉದ್ಯೋಗದ ಅನುಭವ ಜೊತೆಗೆ ಗಳಿಕೆ ಇದ್ದರೆ?
ಮಂಗಳೂರಿನ ಊರ್ವಸ್ಟೋರ್ ನಲ್ಲಿರುವ ಮಿನೇಜಸ್ ಟವರ್ಸ್ ನಲ್ಲಿ ಆರಂಭವಾಗಿರುವ ಸ್ವಸ್ತಿಕಾ ನ್ಯಾಶನಲ್ ಸ್ಕೂಲ್ ನಲ್ಲಿ EARN while LEARN ಕಲಿಯುವಾಗಲೇ ಗಳಿಸಿ ಎಂಬ ಘೋಷವಾಕ್ಯವಿದೆ.
ಏನಿದೆ ಇಲ್ಲಿ: ಇಂಗ್ಲೀಷ್ ಭಾಷಾ ಹಿಡಿತ ಪಡೆಯಲು ತರಬೇತಿ, ದ್ವಿತೀಯ ಮತ್ತು ತೃತೀಯ ಪದವಿ ವಿದ್ಯಾರ್ಥಿಗಳಿಗೆ ಕಲಿಯುವಾಗಲೇ ಗಳಿಕೆಯ ಅವಕಾಶ, ಕೌಶಲಾಧರಿತ ಕೋರ್ಸುಗಳು, ಸಿಎ, ಸಿಎಸ್, ಐಟಿ ಕೋರ್ಸುಗಳು, ಶೇ.100ರಷ್ಟು ಉದ್ಯೋಗಾವಕಾಶ, ಕ್ಯಾಂಪಸ್ ನೊಳಗೇ ಉದ್ಯೋಗಿಯಾಗುವ ತಯಾರಿ, ನುರಿತ ಬೋಧಕ ವರ್ಗ, ಕ್ಲಾಸ್ ರೂಮ್ ಕಲಿಕೆಯಿಂದ ಭಿನ್ನವಾದ ಕಲಿಕಾವಿಧಾನ ಇಲ್ಲಿದೆ ಎನ್ನುತ್ತಾರೆ ಇದರ ಚೇರ್ಮನ್ ಡಾ. ರಾಘವೇಂದ್ರ ಹೊಳ್ಳ.
ವ್ಯಕ್ತಿತ್ವ ವಿಕಸನದ ಕನಸುಗಾರ: ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಸಮೀಪ ನೆತ್ರಕೆರೆಯ ಡಾ. ರಾಘವೇಂದ್ರ ಹೊಳ್ಳ ಎನ್. ಅವರ ಕನಸಿನ ಕೂಸು ಈ ಶಿಕ್ಷಣ ಸಂಸ್ಥೆ. ಮಂಗಳೂರು ವಿವಿಯಲ್ಲಿ ಎಂ.ಎಸ್.ಡಬ್ಲ್ಯು, ಸಮಾಜಶಾಸ್ತ್ರದಲ್ಲಿ ಎಂ.ಫಿಲ್, ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಅಣ್ಣಾಮಲೈ ವಿವಿಯಿಂದ ಎಂಬಿಎ, ಇಂದಿರಾ ಗಾಂಧಿ ಮುಕ್ತ ವಿವಿಯಿಂದ ಪಿಜಿಡಿಪಿಆರ್ ಮಾಡಿದ ಅವರಿಗೆ ಮೈಸೂರು ವಿವಿ ಡಾಕ್ಟರೇಟ್ ನೀಡಿದೆ.
ಕರಾವಳಿ ಕಾಲೇಜು, ಮಂಗಳೂರು ವಿವಿ, ಶ್ರೀನಿವಾಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವವುಳ್ಳ ಅವರಿಗೆ ಮಂಗಳೂರು ವಿಶೇಷ ವಿತ್ತ ವಲಯದಲ್ಲಿ (ಎಸ್.ಇ.ಝೆಡ್) ಮ್ಯಾನೇಜರ್ (ಆಡಳಿತ) ಆಗಿ 13 ವರ್ಷಗಳ ಅನುಭವವಿದೆ. ಬಾಲ್ಯದಿಂದ ಇದುವರೆಗೆ ಸ್ಕೌಟ್ಸ್, ಎನ್.ಎಸ್.ಎಸ್, ಎನ್.ಸಿ.ಸಿ, ಯೂತ್ ಕ್ಲಬ್, ವಿದ್ಯಾರ್ಥಿ ಸಂಘಟನೆ, ರೆಡ್ ಕ್ರಾಸ್, ಕರಾಟೆ, ನಾಟಕ, ಇವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ಪಾಲ್ಗೊಂಡಿರುವ ಅವರು ಹಲವು ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಪರಿಣಾಮಕಾರಿ ಭಾಷಣ ಕಲೆ ತರಬೇತಿ ನೀಡುವ ಅವರು 400ಕ್ಕೂ ಅಧಿಕ ಕಾರ್ಯಕ್ರಮ ನೀಡಿದ್ದಾರೆ. ಜೇಸಿ ಯ ಸಾಫ್ಟ್ ಸ್ಕಿಲ್ ಟ್ರೈನರ್ ಆಗಿರುವ ಅವರು, ಮಂಗಳೂರು ಜೇಸಿ ಸಾಮ್ರಾಟ್ ನ ಸ್ಥಾಪಕಾಧ್ಯಕ್ಷರೂ ಹೌದು. 200ಕ್ಕೂ ಅಧಿಕ ಮಂದಿಯನ್ನು ಜೇಸಿ ಆಂದೋಲನದಲ್ಲಿ ತೊಡಗಿಸಿಕೊಂಡಿರುವ ಅವರು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಮಾಜಿಕ ವಿಷಯದಲ್ಲಿ ಪ್ರಬಂಧ ಮಂಡನೆ, ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವೀಸ್ ಇವರ ಸಾರಥ್ಯದಲ್ಲಿ ಈಗಾಗಲೇ ಹಲವಾರು ಜನರ ಅಗತ್ಯಗಳನ್ನು ಪೂರೈಸಿವೆ.
ಬೋಧಕ ವರ್ಗ: ರಾಜೇಶ್ವರಿ ಡಿ. ಶೆಟ್ಟಿ (ಪ್ರಾಂಶುಪಾಲೆ), ಡಾ. ರಾಘವೇಂದ್ರ ಹೊಳ್ಳ ಎನ್, ಪ್ರತಿಭಾ, ದಿವ್ಯಾ, ಶಾಂತಿ ಕುಮಾರಿ, ಟಿನಿ ಡಿಕೋಸ್ಟ, ಪೂಜಾ ಎಸ್, ಪೂಜಾ ರಾವ್, ಮಹೇಶ್ ಮಯ್ಯ, ಉಷಾ.
ಕೋರ್ಸುಗಳು ಇವು: ಬಿಕಾಂ, ಬಿಬಿಎ, ಬಿಎಸ್ ಡಬ್ಲ್ಯು, ಇಂಗ್ಲೀಷ್ ಕೋರ್ಸ್, ಸಿಎ, ಸಿಎಸ್ ಕೋಚಿಂಗ್, ಟ್ಯಾಲಿ, ಮ್ಯಾನೇಜ್ಮೆಂಟ್, ಎಕ್ಸೆಲ್, ಎಂಎಸ್ ವರ್ಡ್, SAP ಮತ್ತು GST ಕೋರ್ಸುಗಳು ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವೀಸ್ ನಿಂದ ವಿಶೇಷ ತರಬೇತಿಗಳೂ ವಿದ್ಯಾರ್ಥಿಗಳಿಗೆ ಲಭ್ಯ.
ಸೇರಬೇಕಾದರೆ ಏನಾಗಬೇಕು: ದ್ವಿತೀಯ ಪಿಯುಸಿ ಪೂರೈಸಿದವರು ಈ ಕೋರ್ಸುಗಳಿಗೆ ಸೇರಲು ಅರ್ಹರು.
ಹೆಚ್ಚಿನ ಮಾಹಿತಿಗೆ ಕರೆ ಮಾಡಿ: 9901326167
Website: www.swastikanationalschool.com
Instagram: http://www.instagram.com/swastikans_mlore