ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶ ಕಂಡ ಶ್ರೇಷ್ಠ ಸಂವಿಧಾನ, ಆರ್ಥಿಕ ತಜ್ಞರಲ್ಲದೆ, ರಾಜಕೀಯ ಚಿಂತಕರೂ ಆಗಿದ್ದರು. ತಳ ಸಮುದಾಯದ ವಿಮೋಚಕರಾಗಿ ಮಹಾಮಾನವತಾವಾದಿಯಾಗಿದ್ದರು ಎಂದು ತಾಪಂ ಮಾಜಿ ಉಪಾಧ್ಯಕ್ಷ, ಬಿಜೆಪಿ ಎಸ್ಸಿ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ಹೇಳಿದರು.
ಅಮ್ಟೂರಿನ ತಮ್ಮ ನಿವಾಸದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಹೇಳಿದ ವಿದ್ಯಾವಂತರಾಗಿ ಸಂಘಟಿತರಾಗಿ ಹಾಗೂ ತಮ್ಮ ಹಕ್ಕುಗಳಿಗೆ ಹೋರಾಟ ಮಾಡಿ ಎಂಬ ಮಾತನ್ನು ಉಲ್ಲೇಖಿಸಿದರು.
ಗ್ರಾಮ ಸಮಿತಿಯ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಬೈದರಾಡ್ಕ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೋಳ್ತಮಜಲು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಹಾಗೂ ಸದಸ್ಯರಾದ ಗೋಪಾಲ ಪೂಜಾರಿ ಮಾತನಾಡಿದರು. ಶ್ರೀರಾಮ ವಿದ್ಯಾ ಕೇಂದ್ರದ ಕುಶಾಲಪ್ಪ ಅಮ್ಟೂರು ಡಾ. ಬಿ ಆರ್ ಅಂಬೇಡ್ಕರ್ ಕುರಿತು ವಿಚಾರ ಮಂಡಿಸಿದರು. ದಿವಾಕರ ಪೂಜಾರಿ, ಪುರುಷೋತ್ತಮ ಶಾಂತಿಪಳಿಕೆ, ಪ್ರಶಾಂತ್ ಉಪಸ್ಥಿತರಿದ್ದರು.