ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಮಂಗಳವಾರ ಅಜ್ಜಿಬೆಟ್ಟು ವಾರ್ಡ್ ನ ಬಿಜೆಪಿ ಕಾರ್ಯಕರ್ತರಿಂದ
ಬಿ ಸಿ ರೋಡು ಅಜ್ಜಬೆಟ್ಟುವಿನ ಬಸವ ಮಂಟಪದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಈ ಸಂದರ್ಭ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಬಾಳಿಕೆ ದ.ಕ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಸುದರ್ಶನ ಬಜ, ಬಂಟ್ವಾಳ ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು, ಪ್ರಣಮ್ ರಾಜ್ ಅಜ್ಜಿಬೆಟ್ಟು ,ಹಿರಿಯರಾದ ಪ್ರಮೋದ್ ಕುಮಾರ್ ಅಜ್ಜಿಬೆಟ್ಟು , ಶ್ರೀನಿವಾಸ್ ಅಜ್ಜಿಬೆಟ್ಟು ಮತ್ತು ಇತರರು ಉಪಸ್ಥಿತರಿದ್ದರು.