????????????????????????????????????
Odiyoor Sri Gurudevananda Swamiji
ಕೋವಿಡ್ ನಿಂದ ತೊಂದರೆಗೊಳಗಾದ ಜನರಿಗೆ ಬಂಟ್ವಾಳ ತಾಲೂಕಿನ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಸ್ಪಂದಿಸಿದ್ದಾರೆ.
ಕರೋನಾ (ಕೋವಿಡ್-೧೯)ದ ಪರಿಣಾಮ ಲಾಕ್‌ಡೌನ್‌ನಿಂದಾಗಿ ತೊಂದರೆಗೀಡಾದ ಜನತೆಗೆ ಸ್ಪಂದಿಸಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಿಂದ ಶ್ರೀ ಗುರುದೇವಾನಂದ ಸ್ವಾಮಿಗಳವರು ಕರೋಪಾಡಿ ಗ್ರಾಮದ ಸಾವಿರಕ್ಕೂ ಮಿಕ್ಕಿ ಮನೆಗಳಿಗೆ ಅಕ್ಕಿ, ಸಕ್ಕರೆ, ಚಾಹುಡಿ, ಸಾಂಬಾರುಹುಡಿ ಇತ್ಯಾದಿ ದಿನ ಬಳಕೆಯ ವಸ್ತುಗಳನ್ನು ವಿತರಿಸಿದರು.
ಸಕಾಲದಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ನಿರ್ದೇಶಕರಾದ ಕಿರಣ್ ಉರ್ವ, ಕರೋಪಾಡಿ ಗ್ರಾಮ ಸಮಿತಿಯ ಅಧ್ಯಕ್ಷ ರಘುರಾಮ ಶೆಟ್ಟಿ ಪಟ್ಲಗುತ್ತು, ಬಂಟ್ವಾಳ ತಾಲೂಕು ವಿಸ್ತರಣಾಧಿಕಾರಿ ಸದಾಶಿವ ಅಳಿಕೆ, ಸುಬ್ರಾಯ ದೇವಸ್ಥಾನ, ವಗೆನಾಡು ಕ್ಷೇತ್ರ ನಿರ್ವಹಣಾ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು ಹಾಗೂ ಗ್ರಾಮ ಬಂಧುಗಳು ಮತ್ತು ಶ್ರೀ ಸಂಸ್ಥಾನದ ಕಾರ್ಯಕರ್ತರು ಸಹಕರಿಸಿದರು.