ಅನಾರೋಗ್ಯದಿಂದ ಬಳಲುತ್ತಿದ್ದ ಮಂಗಳೂರು ಘಟಕದ ಗೃಹರಕ್ಷಕಿ ಚಂಪಾ ಮನೆಗೆ ಗೃಹರಕ್ಷಕ ದಳ ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಗುರುವಾರ ಬೆಳಗ್ಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಚಂಪಾರವರು ಗೃಹರಕ್ಷಕದಳದಲ್ಲಿ ಕಳೆದ 11 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಸಂಚಾರಿ ಪೂರ್ವ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮಧುಮೇಹ ಮತ್ತು ಕಾಲು ನೋವಿನಿಂದ ಬಳಲುತ್ತಿದ್ದು, ಅವರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸಲಾಯಿತು ಹಾಗೂ ಗೃಹರಕ್ಷಕ ದಳ ಪರವಾಗಿ 25 ಕೆ.ಜಿ. ಅಕ್ಕಿ, ಮುಖಕವಚ, ಸಾನಿಟೈಸರ್ಗಳನ್ನು ಜಿಲ್ಲಾ ಸಮಾದೇಷ್ಟರಾದ ಡಾ ಮುರಲೀ ಮೋಹನ್ ಚೂಂತಾರು ರವರು ನೀಡಿದರು. ಈ ಸಂದರ್ಭದಲ್ಲಿ ಭುವಿನಾ ಡೆಂಟಲ್ ಕ್ಲಿನಿಕ್ನ ಡೆಂಟಲ್ ಸರ್ಜನ್ ಡಾ. ಅಶ್ವಥ್ ಕುಮಾರ್ ಉಪಸ್ಥಿತರಿದ್ದರು. ಮಂಗಳೂರು ಘಟಕದ ಗೃಹರಕ್ಷಕರುಗಳಾದ ದಿವಾಕರ, ಮಹೇಶ್ ಮತ್ತು ಲಿಂಗಪ್ಪ ಇವರುಗಳು ಉಪಸ್ಥಿತರಿದ್ದರು. ಇದೇ ವೇಳೆ ಚಂಪಾ ಅವರಿಗೆ ಅಗತ್ಯವುಳ್ಳ ವೈದ್ಯಕೀಯ ಚಿಕಿತ್ಸೆಗಳ ಕುರಿತು ಸಲಹೆ ನೀಡಲಾಯಿತು.