ದ.ಕ.-ಹೊಸ ಕೋವಿಡ್ ಕೇಸ್ ಇಲ್ಲ, 2 ಮಂದಿ ನಿಗಾದಲ್ಲಿ
ಕೋವಿಡ್ 19 ಪ್ರಕರಣಗಳಿಗೆ ಸಂಬಂಧಿಸಿ ಗುರುವಾರ 8 ಮಂದಿಯ ಲ್ಯಾಬ್ ಪರೀಕ್ಷಾ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿದೆ. 25 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 2 ಮಂದಿ ನಿಗಾದಲ್ಲಿರಿಸಲಾಗಿದೆ. ಹೀಗಾಗಿ ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಪಟ್ಟ 381 ಮಂದಿಯಲ್ಲಿ 344 ನೆಗೆಟಿವ್ ಬಂದರೆ 12 ಪಾಸಿಟಿವ್. ಅವರಲ್ಲಿ ನಾಲ್ವರು ಡಿಸ್ಚಾರ್ಜ್ ಆಗಿದ್ದಾರೆ. 3352 ಮಂದಿ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. 25 ಮಂದಿಯ ಪರೀಕ್ಷಾ ವರದಿ ಬರಬೇಕು. ಇದು ಏ.9, 2020ರ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ಹೊರಡಿಸಿದ ಕೋವಿಡ್ 19ರ ಕುರಿತ ಪ್ರಕಟಣೆಯ ಸಾರಾಂಶ.
www.bantwalnews.com Editor: Harish Mambady
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…